ADVERTISEMENT

ಭಾರೀ ಮಳೆ ನಡುವೆಯೂ ಅಮರನಾಥ ಯಾತ್ರೆಗೆ ತೆರಳಿದ 6,900 ಯಾತ್ರಿಕರು

ಪಿಟಿಐ
Published 5 ಜುಲೈ 2025, 7:25 IST
Last Updated 5 ಜುಲೈ 2025, 7:25 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   

ಜಮ್ಮು: ಭಾರೀ ಮಳೆಯ ನಡುವೆಯೂ, 6,900ಕ್ಕೂ ಹೆಚ್ಚು ಯಾತ್ರಿಕರ ಹೊಸ ತಂಡ ಶನಿವಾರ ಇಲ್ಲಿನ ಭಗವತಿ ನಗರದಲ್ಲಿರುವ ಮೂಲ ಶಿಬಿರದಿಂದ ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ದೇವಾಲಯಕ್ಕೆ ಭೇಟಿ ನೀಡಲು ತೆರಳಿತು.

ಮೂರು ದಿನಗಳಿಂದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮತ್ತು ಗಂದರ್ಬಲ್ ಜಿಲ್ಲೆಯ ಬಾಲ್ಟಾಲ್‌ ಮಾರ್ಗಗಳಿಂದ ಸುಮಾರು 30,000 ಯಾತ್ರಿಕರು 3,880 ಮೀಟರ್ ಎತ್ತರದ ಗುಹಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

6,979 ಯಾತ್ರಿಕರ ನಾಲ್ಕನೇ ತಂಡ ಶನಿವಾರ ಬೆಳಿಗ್ಗೆ 3.30 ರಿಂದ 4.05ರ ನಡುವೆ ತೆರಳಿತು. ಯಾತ್ರಿಕರೊಂದಿಗೆ ಎರಡು ಬೆಂಗಾವಲು ಪಡೆಗಳು ತೆರಳಿದ್ದು ಬಿಗಿಯಾದ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ತಂಡದಲ್ಲಿ 5,196 ಪುರುಷರು, 1,427 ಮಹಿಳೆಯರು, 24 ಮಕ್ಕಳು, 331 ಸಾಧುಗಳು ಮತ್ತು ಒಬ್ಬರು ತೃತೀಯಲಿಂಗಿ ಇದ್ದಾರೆ.

4,226 ಯಾತ್ರಿಕರು 161 ವಾಹನಗಳಲ್ಲಿ ಪಹಲ್ಗಾಮ್ ಮಾರ್ಗದಲ್ಲಿ ಹಾಗೂ 2,753 ಯಾತ್ರಾರ್ಥಿಗಳು 151 ವಾಹನಗಳಲ್ಲಿ ಬಾಲ್ಟಾಲ್ ಮಾರ್ಗದಲ್ಲಿ ತೆರಳಿದರು ಎಂದು ಅವರು ಹೇಳಿದರು.

ಜಮ್ಮುವಿನಾದ್ಯಂತ 34 ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾತ್ರಾರ್ಥಿಗಳಿಗೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಟ್ಯಾಗ್‌ಗಳನ್ನು ನೀಡಲಾಗಿದ್ದು ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.