
ಪಿಟಿಐ
ಶ್ರೀನಗರ: ಕಾಶ್ಮೀರದದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಪಹಲ್ಗಾಮ್ ಮತ್ತು ಬಾಲ್‌ಟಾಲ್ ಹಾದಿಯಿಂದ ಅಮರನಾಥ ಯಾತ್ರೆಯನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರತಿಕೂಲ ಹವಮಾನ ಪರಿಸ್ಥಿತಿಯ ಕಾರಣಕ್ಕೆ ಗುರುವಾರ ಜಮ್ಮುವಿನಿಂದ ಕೂಡ ಯಾತ್ರೆ ಸ್ಥಗಿತಗೊಳಿಸಲಾಗುವುದು.
‘ಪಹಲ್ಗಾಮ್ ಮತ್ತು ಬಾಲ್‌ಟಾಲ್ ಬೇಸ್ ಕ್ಯಾಂಪ್‌ನ ಶ್ರೀ ಅಮರನಾಥ ಯಾತ್ರೆಯನ್ನು ಜುಲೈ 30ರಿಂದ ಸ್ಥಗಿತಗೊಳಿಸಲಾಗುವುದು’ ಎಂದು ಜಮ್ಮು ಕಾಶ್ಮೀರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ‘ಎಕ್ಸ್’ನಲ್ಲಿ ತಿಳಿಸಿದೆ.
ಬುಧವಾರ ಬೆಳಗಿನ ಜಾವದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಬಾಲ್‌ಟಾಲ್ ಮತ್ತು ನುನ್ವಾನ್, ಚಂದನವಾಡಿ ಶಿಬಿರಗಳಿಂದ ಯಾತ್ರೆಗೆ ಅವಕಾಶ ನೀಡಲಾಗಿಲ್ಲ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಬಿಧುರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.