ನ್ಯೂಯಾರ್ಕ್: ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್‌ನ ವಿಮಾನವನ್ನು ಮಾರ್ಗ ಬದಲಿಸಿ ಇಟಲಿಯ ರೋಮ್‌ಗೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಬಾಂಬ್ ಬೆದರಿಕೆ ಕರೆ ಬಂದಿರುವುದೇ ವಿಮಾನದ ಮಾರ್ಗ ಬದಲಿಸಲು ಕಾರಣ ಎನ್ನಲಾಗಿದೆ.
ವಿಮಾನವು (ಎಎ292) ಫೆ.22ರಂದು ನ್ಯೂಯಾರ್ಕ್‌ನ ಜೆಎಫ್‌ಕೆ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಟಿತ್ತು. ಈಗ, ಅದರ ಮಾರ್ಗ ಬದಲಿಸಿದ್ದು, ರೋಮ್‌ಗೆ ತೆರಳಿದೆ ಎಂದು ವಿಮಾನಗಳ ಹಾರಾಟದ ಮೇಲೆ ಕಣ್ಗಾವಲಿಡುವ ಜಾಲತಾಣ ‘ಫ್ಲೈಟ್‌ರೇಡಾರ್24.ಕಾಂ’ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.