ADVERTISEMENT

ತಿರುಪತಿ ದೇವಸ್ಥಾನಕ್ಕೆ ₹9 ಕೋಟಿ ದೇಣಿಗೆ ನೀಡಿದ ಅಮೆರಿಕ ಮೂಲದ ಭಕ್ತ

ಪಿಟಿಐ
Published 26 ನವೆಂಬರ್ 2025, 10:01 IST
Last Updated 26 ನವೆಂಬರ್ 2025, 10:01 IST
<div class="paragraphs"><p>ತಿರುಪತಿ ತಿರುಮಲ ದೇವಸ್ಥಾನ</p></div>

ತಿರುಪತಿ ತಿರುಮಲ ದೇವಸ್ಥಾನ

   

ತಿರುಪತಿ (ಆಂಧ್ರಪ್ರದೇಶ): ಅಮೆರಿಕ ಮೂಲದ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ₹9ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂ.ರಾಮಲಿಂಗ ರಾಜು ಎಂಬುವವರು ಪಿಎಸಿ-1, ಪಿಎಸಿ-2 ಮತ್ತು ಪಿಎಸಿ-3 ಕಟ್ಟಡಗಳ ನವೀಕರಣಕ್ಕಾಗಿ ₹9 ಕೋಟಿ ದೇಣಿಗೆ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ನ (ಟಿಟಿಡಿ) ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಾಯ್ಡು ಪೋಸ್ಟ್‌ ಹಂಚಿಕೊಂಡಿದ್ದು, ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಟಿಟಿಡಿಗೆ ನೀಡಿದ ದೇಣಿಗೆಗಾಗಿ ಟಿಟಿಡಿ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆಯೂ 2012ರಲ್ಲಿ ರಾಜು ಅವರು ಟಿಟಿಡಿಗೆ ₹16 ಕೋಟಿ ದೇಣಿಗೆ ನೀಡಿದ್ದರು ಎಂದೂ ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.