ADVERTISEMENT

ಚೆನ್ನೈ: ಬ್ರಿಟನ್‌ನಿಂದ ಹಿಂದಿರುಗಿರುವ ವ್ಯಕ್ತಿಗೆ ಕೋವಿಡ್‌

ಹೊಸ ವೈರಸ್‌ ಹೆಚ್ಚಿಸಿದ ಆತಂಕ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 6:38 IST
Last Updated 22 ಡಿಸೆಂಬರ್ 2020, 6:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಕೊರೊನಾ ವೈರಸ್‌ ರೂಪಾಂತರಗೊಂಡು ಬ್ರಿಟನ್‌ನಲ್ಲಿ ಪ್ರಸರಣವಾಗುತ್ತಿರುವುದು ವಿಶ್ವದೆಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ಬ್ರಿಟನ್‌ನಿಂದ ಚೆನ್ನೈಗೆ ಬಂದಿರುವ ಪ್ರಯಾಣಿಕರೊಬ್ಬರಿಗೆ ಕೋವಿಡ್‌–19 ದೃಢಪಟ್ಟಿರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕೋವಿಡ್‌–19 ದೃಢಪಟ್ಟ ಪ್ರಯಾಣಿಕನನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಅವರನ್ನು ಮಂಗಳವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಗಂಟಲು ದ್ರವದ ಮಾದರಿಯನ್ನು ಪುಣೆಯಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿದೆ.

‘ಈ ಪ್ರಯಾಣಿಕನಲ್ಲಿ ಕಾಣಿಸಿಕೊಂಡಿರುವ ಸೋಂಕಿಗೆ ಹಳೆಯ ವೈರಸ್‌ ಕಾರಣವೋ ಅಥವಾ ಬ್ರಿಟನ್‌ನಲ್ಲಿ ಇದೀಗ ವ್ಯಾಪಕವಾಗುತ್ತಿರುವ ರೂಪಾಂತರಗೊಂಡಿರುವ ವೈರಸ್‌ ಕಾರಣವೋ ಎಂಬುದನ್ನು ಎನ್‌ಐವಿಯಲ್ಲಿ ವಿಶ್ಲೇಷಿಸಲಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೆ.ರಾಧಾಕೃಷ್ಣನ್‌ ತಿಳಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಕೊರೊನಾ ವೈರಸ್‌ನ ಪ್ರಸರಣದ ಎರಡನೇ ಅಲೆ ಕಾಣಿಸಿಕೊಳ್ಳದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಬಾರದು. ಬ್ರಿಟನ್‌ನಿಂದ ಹಿಂದಿರುಗಿರುವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಸೋಂಕಿಗೆ ಹಳೆಯ ಅಥವಾ ರೂಪಾಂತರ ವೈರಸ್‌ ಕಾರಣವೇ ಎಂಬುದು ವೈಜ್ಞಾನಿಕ ವಿಶ್ಲೇಷಣೆಯಿಂದ ಗೊತ್ತಾಗಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.