ADVERTISEMENT

ಯುವಕರು ನೇತಾಜಿಯಿಂದ ಸ್ಫೂರ್ತಿ ಪಡೆಯಬೇಕು: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 8:58 IST
Last Updated 23 ಜನವರಿ 2021, 8:58 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದಹಿನ್ನೆಲೆಯಲ್ಲಿ ಕೇಂದ್ರ ಗಗೃಹ ಸಚಿವ ಅಮಿತ್ ಶಾ ನೇತಾಜಿಗೆ ಗೌರವ ನಮನ ಸಲ್ಲಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಬಲವನ್ನು ನೀಡಿದ ಅವರ ವರ್ಚಸ್ವಿ ನಾಯಕತ್ವದಲ್ಲಿ ದೇಶದ ಯುವಕರು ಒಂದಾಗಿ್ದರು ಎಂದು ಬಣ್ಣಿಸಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ, ಮಕ್ಕಳು ಮತ್ತು ಯುವಕರು ದೇಶದ ಸ್ವಾತಂತ್ರ್ಯಕ್ಕೆ ನೇತಾಜಿ ನೀಡಿದ ಕೊಡುಗೆಯಿಂದ ಸ್ಫೂರ್ತಿ ಪಡೆಯಬಹುದು ಮತ್ತು ಇದು ಸ್ವಾವಲಂಬಿ ಭಾರತ ನಿರ್ಮಿಸಲು ಸಹಾಯ ಮಾಡಬಹುದು ಎಂದು ಹೇಳಿದರು.

"ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ಶೌರ್ಯವು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿಯನ್ನು ನೀಡಿತು. ಪ್ರತಿಕೂಲ ಸಂದರ್ಭಗಳಲ್ಲಿ ಅವರು ತಮ್ಮ ವರ್ಚಸ್ವಿ ನಾಯಕತ್ವದೊಂದಿಗೆ ದೇಶದ ಯುವಕರನ್ನು ಸಂಘಟಿಸಿದರು. ಸ್ವಾತಂತ್ರ್ಯ ಚಳವಳಿಯ ಅಂತಹ ಮಹಾನ್ ವೀರರ 125 ನೇ ಜನ್ಮ ದಿನಾಚರಣೆಯಂದು ನಾನು ನನ್ನ ಹೃತ್ಪೂರ್ವಕ ಗೌರವಗಳನ್ನು ಅರ್ಪಿಸುತ್ಥೆನೆ "ಎಂದು ಶಾ ಟ್ವೀಟ್ ಮಾಡಿದ್ದರೆ.
.
ಎರಡು ದಿನಗಳ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಪ್ರವಾಸದಲ್ಲಿರುವ ಗೃಹ ಸಚಿವರು, ಗುವಾಹಟಿಯಲ್ಲಿರುವ ಬೋಸ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.

ADVERTISEMENT

"ಸುಭಾಷ್ ಬಾಬು ಅವರಲ್ಲಿ ಅಪಾರ ಧೈರ್ಯ ಮತ್ತು ಅನನ್ಯ ಸಂಕಲ್ಪದ ಅನಂತ ಹರಿವು ಇತ್ತು. ಅವರ ಅದ್ಭುತ ವ್ಯಕ್ತಿತ್ವ ಮತ್ತು ರೋಮಾಂಚಕ ಧ್ವನಿಯು ಜನರ ಹೃದಯದಲ್ಲಿ ಸ್ವಾತಂತ್ರ್ಯದ ಉಬ್ಬರವಿಳಿತವನ್ನು ಸೃಷ್ಟಿಸಿತು. ಅವರ ಜೀವನವು ದೇಶದ ಯುವಕರಿಗೆ ಆದರ್ಶಪ್ರಾಯವಾಗಿದೆ" ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.