ADVERTISEMENT

ವಾಯುದಾಳಿಯಲ್ಲಿ 250ಕ್ಕಿಂತ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ: ಅಮಿತ್ ಶಾ

ಏಜೆನ್ಸೀಸ್
Published 4 ಮಾರ್ಚ್ 2019, 12:16 IST
Last Updated 4 ಮಾರ್ಚ್ 2019, 12:16 IST
   

ಅಹಮದಾಬಾದ್: ಪುಲ್ವಾಮ ಭಯೋತ್ಪಾದನಾ ದಾಳಿಯ 13ನೇ ದಿನಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ 250ಕ್ಕಿಂತ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಭಾನುವಾರ ಅಹಮದಾಬಾದ್‍ನಲ್ಲಿ ಲಕ್ಷ್ಯ JITO (ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್) ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಳೆದ 5 ವರ್ಷದಲ್ಲಿ ಎರಡು ಬಾರಿಉಗ್ರ ದಾಳಿ ನಡೆದಿತ್ತು. ಇದಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರವನ್ನು ನೀಡಿದೆ.

5 ವರ್ಷಗಳಲ್ಲಿ ಉರಿ ಮತ್ತು ಪುಲ್ವಾಮದಲ್ಲಿ ಎರಡು ಬಾರಿದೊಡ್ಡ ಮಟ್ಟದಲ್ಲಿಉಗ್ರ ದಾಳಿ ನಡೆದಿತ್ತು.ಉರಿ ದಾಳಿ ನಂತರ ನಮ್ಮ ಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ನಿರ್ದಿಷ್ಟ ದಾಳಿ ಮಾಡುವ ಮೂಲಕ ಪ್ರತೀಕಾರ ನಡೆಸಿತ್ತು.

ADVERTISEMENT

ಪುಲ್ವಾಮ ದಾಳಿ ನಂತರ ಈ ಬಾರಿ ನಿರ್ದಿಷ್ಟ ದಾಳಿ ನಡೆಯಲ್ಲ ಎಂದು ಎಲ್ಲರೂಊಹಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಯುದಾಳಿ ನಡೆಸಿ 250ಕ್ಕಿಂತಲೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತು. ಇದರಲ್ಲಿ ನಮ್ಮ ಯೋಧರು ಸುರಕ್ಷಿತವಾಗಿದ್ದರು ಎಂದಿದ್ದಾರೆ ಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.