ADVERTISEMENT

ಅಮರಾವತಿ ಔಷಧ ವ್ಯಾಪಾರಿ ಕೊಲೆ, ಐಎಸ್‌ ಕೈವಾಡ? ಅಧಿಕಾರಿಗಳ ಶಂಕೆ

ಪಿಟಿಐ
Published 7 ಜುಲೈ 2022, 14:10 IST
Last Updated 7 ಜುಲೈ 2022, 14:10 IST
   

ನವದೆಹಲಿ: ಮಧ್ಯಪ್ರಾಚ್ಯ ಉಗ್ರ ಸಂಘಟನೆ ಐಎಸ್ ಹಿಂಸಾಚಾರದಿಂದ ಸ್ವಯಂ ಪ್ರೇರಿತರಾಗಿ ಅಮರಾವತಿಯ ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆಹತ್ಯೆ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳು ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ತನಿಖಾಧಿಕಾರಿಗಳು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿಯಿಂದ ಅಮಾನತ್ತಾದ ನೂಪುರ್ ಶರ್ಮಾ ಅವರಿಗೆ ಬೆಂಬಲ ಸೂಚಿಸಿದ ಕಾರಣಕ್ಕೆಉಮೇಶ್‌ ಕೊಲ್ಹೆ ಅವರನ್ನು ಜೂನ್‌ 21ರಂದು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಕತ್ತು ಸೀಳಿ ಹತ್ಯೆ ಮಾಡಿದ್ದರು.

ಆರೋಪಿಗಳಿದ್ದ ಸ್ಥಳಗಳಲ್ಲಿ ನಡೆಸಿದ ಶೋಧದ ವೇಳೆ ದ್ವೇಷದ ಸಂದೇಶ ಹರಡುವ ಕರಪತ್ರಗಳು, ಚಾಕು, ಮೊಬೈಲ್ ಫೋನ್‌, ಸಿಮ್ ಕಾರ್ಡ್‌ಗಳು, ಮೆಮೊರಿ ಕಾರ್ಡ್‌ ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ.

ADVERTISEMENT

’ಮೇಲ್ನೋಟಕ್ಕೆಹಂತಕರು ಐಸಿಸ್‌ನಿಂದ ‘ಸ್ವಯಂ ಪ್ರೇರಿತರಾಗಿ’ ಕೃತ್ಯವೆಸಗಿರಬಹುದು. ತನಿಖಾಧಿಕಾರಿಗಳು ಐಎಸ್ ಸೇರಿದಂತೆ ವಿದೇಶಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಮಹಾರಾಷ್ಟ್ರದ 13 ಸ್ಥಳಗಳಲ್ಲಿ ಶೋಧ ನಡೆಸಿದೆ. ಎನ್‌ಐಎ ಪ್ರಕರಣದ ತನಿಖೆ ವಹಿಸಿಕೊಳ್ಳುವುದಕ್ಕೂ ಮೊದಲು ಮಹಾರಾಷ್ಟ್ರ ಪೊಲೀಸರು ಏಳು ಜನರನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.