ADVERTISEMENT

ಒಡಿಶಾ: ಅಮೃತ್ ಭಾರತ್‌ ಎಕ್ಸ್‌ಪ್ರೆಸ್‌ ಸೇರಿ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ

ಪಿಟಿಐ
Published 27 ಸೆಪ್ಟೆಂಬರ್ 2025, 7:33 IST
Last Updated 27 ಸೆಪ್ಟೆಂಬರ್ 2025, 7:33 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಜಾರ್ಸುಗುಡ: ಒಡಿಶಾದಲ್ಲಿ ದೂರಸಂಪರ್ಕ, ರೈಲ್ವೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ₹60,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದಾರೆ.

ಒಡಿಶಾದ ಜಾರ್ಸುಗುಡದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಅವರು, ದೇಶದಾದ್ಯಂತ ಎಂಟು ಐಐಟಿಗಳ ವಿಸ್ತರಣೆ ಸೇರಿದಂತೆ ಗುಜರಾತ್‌ನ ಸೂರತ್ ಜಿಲ್ಲೆಯ ಉಧ್ನಾ ಮತ್ತು ಒಡಿಶಾದ ಬೆರ್ಹಾಂಪುರದ ನಡುವೆ ಸಂಚರಿಸುವ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.

ADVERTISEMENT

ಇದೇ ವೇಳೆ ₹1,400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 34 ಕಿ.ಮೀ. ದೂರದ ಕೊರಾಪುಟ್-ಬೈಗುಡ ರೈಲು ಮಾರ್ಗ ಮತ್ತು 82 ಕಿ.ಮೀ. ಮನಾಬರ್-ಕೊರಾಪುಟ್-ಗೋರಾಪುರ್ ವಿಭಾಗದ ರೈಲು ಮಾರ್ಗವನ್ನು ಅವರು ಉದ್ಘಾಟಿಸಿದ್ದಾರೆ.

ಬಿಎಸ್‌ಎನ್‌ಎಲ್‌ನ ‘ಸ್ವದೇಶಿ’ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ 97,500ಕ್ಕೂ ಹೆಚ್ಚು 4 ಜಿ ಟೆಲಿಕಾಂ ಟವರ್‌ಗಳು ಹಾಗೂ ಸಂಬಲ್ಪುರ ನಗರದಲ್ಲಿ ₹273 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೇಲ್ಸೇತುವೆಯನ್ನು ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.

ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೋದಿ ಅವರು ನೀಡುತ್ತಿರುವ ಆರನೇ ಭೇಟಿ ಇದಾಗಿದೆ.

2018ರ ಸೆಪ್ಟೆಂಬರ್ 22ರಂದು ಮೋದಿ ಅವರು ಜಾರ್ಸುಗುಡದಲ್ಲಿ ಒಡಿಶಾದ ಎರಡನೇ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.