ADVERTISEMENT

ಮೂಸೆವಾಲಾ ಹಂತಕರನ್ನು ಜೀವಂತವಾಗಿ ಹಿಡಿಯಬೇಕು ಎಂದುಕೊಂಡಿದ್ದೆವು: ಪಂಜಾಬ್ ಪೊಲೀಸ್

ಪಿಟಿಐ
Published 21 ಜುಲೈ 2022, 11:12 IST
Last Updated 21 ಜುಲೈ 2022, 11:12 IST
ಎನ್‌ಕೌಂಟರ್‌ನಲ್ಲಿ ಭಾಗವಹಿಸಿದ್ದ ರಕ್ಷಣಾ ಸಿಬ್ಬಂದಿ (ಪಿಟಿಐ ಚಿತ್ರ)
ಎನ್‌ಕೌಂಟರ್‌ನಲ್ಲಿ ಭಾಗವಹಿಸಿದ್ದ ರಕ್ಷಣಾ ಸಿಬ್ಬಂದಿ (ಪಿಟಿಐ ಚಿತ್ರ)   

ಅಮೃತಸರ:ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್‌ಗಳನ್ನು ಜೀವಂತವಾಗಿ ಹಿಡಿಯಬೇಕು ಎಂದುಕೊಂಡಿದ್ದೆವು. ಹಾಗಾಗಿ ಶರಣಾಗವಂತೆ ಅವರಿಗೆ ಸೂಚಿಸಿದ್ದೆವು ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

ಶರಣಾಗುವಂತೆ ನೀಡಿದ್ದ ಸೂಚನೆಯನ್ನು ಲೆಕ್ಕಿಸದೆ, ಗ್ಯಾಂಗ್‌ಸ್ಟರ್‌ಗಳಾದಜಗರೂಪ್‌ ಸಿಂಗ್‌ ರೂಪ ಹಾಗೂ ಮನ್‌ಪ್ರಿತ್‌ ಸಿಂಗ್ ಅಲಿಯಾಸ್‌ ಮನ್ನು ಕುಸಾಬುಧವಾರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಪ್ರತಿದಾಳಿ ಆರಂಭಿಸಿದ್ದರು. ಸುಮಾರು ಐದು ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ ಜಗರೂಪ್‌ ಹಾಗೂ ಮನ್ನು ಹತ್ಯೆಯಾಗಿದ್ದರು. ಭಾರತ–ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಅಮೃತಸರದ ಭಕ್ನಾಜಿಲ್ಲೆಯ ಕಟ್ಟಡವೊಂದರಲ್ಲಿ ಅವರು ಅಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಮೃತಸರ ಉಪ ಪೊಲೀಸ್‌ ಆಯುಕ್ತ (ಡಿಸಿಪಿ) ಎಂ.ಎಸ್‌. ಭುಲ್ಲಾರ್‌ ಅವರುಎನ್‌ಕೌಂಟರ್‌ ಕುರಿತು ಮಾತನಾಡಿದ್ದು,'ಅವರನ್ನು (ಗ್ಯಾಂಗ್‌ಸ್ಟರ್‌ಗಳನ್ನು) ಜೀವಂತವಾಗಿ ಸೆರೆಹಿಡಿಯಬೇಕು ಎಂದುಕೊಂಡಿದ್ದೆವು. ಅದಕ್ಕಾಗಿ ಶರಣಾಗುವ ಅವಕಾಶ ನೀಡಿದ್ದೆವು. ಆದರೆ, ಅವರು ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ಹೀಗಾಗಿ ನಡೆಸಿದ ಪ್ರತಿದಾಳಿ ವೇಳೆ ಮೃತಪಟ್ಟಿದ್ದಾರೆ' ಎಂದುತಿಳಿಸಿದ್ದಾರೆ.

ADVERTISEMENT

ಮರಣೋತ್ತರ ಪರೀಕ್ಷೆ ಸಲುವಾಗಿ ಶವಗಳನ್ನು ಅಮೃತಸರ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಗುಂಡಿನ ಚಕಮಕಿ ವೇಳೆ ಮೂವರು ಪೊಲೀಸರು ಮತ್ತು ಪತ್ರಕರ್ತರೊಬ್ಬರು ಸಹ ಗಾಯಗೊಂಡಿದ್ದಾರೆ.

ಪಂಜಾಬ್‌ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.