ADVERTISEMENT

ಕೋವಿಡ್–19: ಉಕ್ರೇನ್‌ನಿಂದ ಭಾರತ ತಲುಪಿದ 184 ಆಮ್ಲಜನಕ ಸಾಂದ್ರಕಗಳು

​ಪ್ರಜಾವಾಣಿ ವಾರ್ತೆ
Published 31 ಮೇ 2021, 8:06 IST
Last Updated 31 ಮೇ 2021, 8:06 IST
184 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಮೊದಲ ವಿಮಾನ ಉಕ್ರೇನ್‌ನಿಂದ ಇಂದು ಬೆಳಿಗ್ಗೆ ಭಾರತ ತಲುಪಿದೆ (ಚಿತ್ರ ಕೃಪೆ – ವಿದೇಶಾಂಗ ಸಚಿವಾಲಯದ ವಕ್ತಾರರ ಟ್ವಿಟರ್ ಖಾತೆ)
184 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಮೊದಲ ವಿಮಾನ ಉಕ್ರೇನ್‌ನಿಂದ ಇಂದು ಬೆಳಿಗ್ಗೆ ಭಾರತ ತಲುಪಿದೆ (ಚಿತ್ರ ಕೃಪೆ – ವಿದೇಶಾಂಗ ಸಚಿವಾಲಯದ ವಕ್ತಾರರ ಟ್ವಿಟರ್ ಖಾತೆ)   

ನವದೆಹಲಿ: ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಉಕ್ರೇನ್‌ ಕಳುಹಿಸಿಕೊಟ್ಟಿರುವ ಆಮ್ಲಜನಕ ಸಾಂದ್ರಕಗಳು (ಆಕ್ಸಿಜನ್ ಕಾನ್ಸಂಟ್ರೇಟರ್‌) ಸೋಮವಾರ ಭಾರತ ತಲುಪಿವೆ.

184 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಮೊದಲ ವಿಮಾನ ಉಕ್ರೇನ್‌ನಿಂದ ಇಂದು ಬೆಳಿಗ್ಗೆ ಬಂದಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

‘ಆಮ್ಲಜನಕ ಸಾಂದ್ರಕಗಳು ತಲುಪಿವೆ. ಉಕ್ರೇನ್‌ಗೆ ಧನ್ಯವಾದಗಳು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ADVERTISEMENT

ದೇಶವು ಕೋವಿಡ್‌ ಎರಡನೇ ಅಲೆಯಿಂದ ತತ್ತರಿಸಿದ ಸಂದರ್ಭ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿತ್ತು. ಸಂಕಷ್ಟದ ಸಂದರ್ಭದಲ್ಲಿ ಅನೇಕ ದೇಶಗಳು ಭಾರತದ ನೆರವಿಗೆ ಧಾವಿಸಿದ್ದವು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ನೆರವಾಗಿದ್ದ ಅಮೆರಿಕ, ಸ್ವಿಟ್ಜರ್‌ಲೆಂಡ್, ಪೋಲೆಂಡ್, ನೆದರಲ್ಯಾಂಡ್ಸ್ ಮತ್ತು ಇಸ್ರೇಲ್‌ ಆಮ್ಲಜನಕ ಸಾಂದ್ರಕಗಳು, ರೆಮ್‌ಡಿಸಿವಿರ್ ಔಷಧ, ವೆಂಟಿಲೇಟರ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.