ADVERTISEMENT

₹ 4.35 ಕೋಟಿ ತೆರಿಗೆ ಬಾಕಿ‘ಆನಂದ ಭವನ’ಕ್ಕೆ ನೋಟಿಸ್

ಪಿಟಿಐ
Published 20 ನವೆಂಬರ್ 2019, 17:20 IST
Last Updated 20 ನವೆಂಬರ್ 2019, 17:20 IST
ಆನಂದ ಭವನ
ಆನಂದ ಭವನ   

ಲಖನೌ: ಜವಾಹರಲಾಲ್ ನೆಹರು ಪೂರ್ವಜರಿಗೆ ಸೇರಿದ ಆನಂದ ಭವನ ₹4.35 ಕೋಟಿ ಮೊತ್ತದ ವಸತಿ ತೆರಿಗೆ ಬಾಕಿ ಉಳಿಸಿಕೊಂಡಿರುವುದಕ್ಕಾಗಿ ಅಲಹಾಬಾದ್ ನಗರಾಡಳಿತ ನೋಟಿಸ್ ಜಾರಿ ಮಾಡಿದೆ.

ವಿಷಯ ದೃಢಪಡಿಸಿರುವ ಮೇಯರ್ ಅಭಿಲಾಷ ಗುಪ್ತ ನಂದಿ, ‘ಆನಂದ ಭವನವನ್ನು ಸೇವಾ ಉದ್ದೇಶದಿಂದ ದತ್ತಿ ಕಟ್ಟಡ ಎಂದು ನೋಂದಣಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ವಸತಿ ತೆರಿಗೆ ಪಾವತಿಸಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಆದರೆ ಇದಕ್ಕೆ ಸೂಕ್ತ ದಾಖಲೆ ಸಲ್ಲಿಸಿಲ್ಲ. ಆದ್ದರಿಂದ ವಸತಿ ತೆರಿಗೆ ಪಾವತಿಸುವಂತೆ ಕಳೆದ ವಾರ ನೋಟಿಸ್ ಜಾರಿ ಮಾಡಲಾಗಿದೆ’

‘1990ರವರೆಗೂ ₹600 ತೆರಿಗೆ ಪಾವತಿಸುತ್ತಿದ್ದರು. ಆದರೆ ನಂತರ ಯಾವುದೇ ತೆರಿಗೆ ಪಾವತಿಸಿಲ್ಲ. ಪಾರಂಪರಿಕ ಕಟ್ಟಡ ಎಂದು ಆನಂದ ಭವನವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದರು. ಆದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಅವರು ನಮಗೆ ನೀಡಿಲ್ಲ’ ಎಂದು ಸಹ ಗುಪ್ತ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಕಾಂಗ್ರೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.