ADVERTISEMENT

2026ರ ಜನಗಣತಿ ಆಧಾರದಲ್ಲಿ ಒಳಮೀಸಲಾತಿ: ಚಂದ್ರಬಾಬು ನಾಯ್ಡು

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ

ಪಿಟಿಐ
Published 20 ಮಾರ್ಚ್ 2025, 14:14 IST
Last Updated 20 ಮಾರ್ಚ್ 2025, 14:14 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಅಮರಾವತಿ: 2026ರಲ್ಲಿ ನಡೆಯುವ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಜಾರಿಗೊಳಿಸಲು ಟಿಡಿಪಿ ನೇತೃತ್ವದ ಸರ್ಕಾರವು ಬದ್ಧವಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘2026ರಲ್ಲಿ ಜನಗಣತಿ ನಡೆಸಲಾಗುವುದು. ರಾಜ್ಯದ 26 ಜಿಲ್ಲೆಗಳ ಜನಸಂಖ್ಯೆಯ ನಿಖರ ಮಾಹಿತಿ ಪ್ರಸ್ತುತ ಲಭ್ಯವಿಲ್ಲದ ಕಾರಣ ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡಲು ಸಾಧ್ಯವಿಲ್ಲ’ ಎಂದರು.

ಚುನಾವಣಾ ಪೂರ್ವ ಭರವಸೆಯಂತೆ ಒಳಮೀಸಲಾತಿ ಜಾರಿಗೊಳಿಸುವುದು ನಿಶ್ಚಿತ ಎಂದು ನಾಯ್ಡು ಪುನರುಚ್ಚರಿಸಿದ್ದಾರೆ.

ADVERTISEMENT

ಒಳಮೀಸಲಾತಿ ಕುರಿತ ಅಧ್ಯಯನಕ್ಕಾಗಿ ನಾಯ್ಡು ಸರ್ಕಾರವು ರಾಜೀವ್‌ ರಂಜನ್‌ ಮಿಶ್ರಾ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಾದ ರೆಳ್ಳಿ ಸಮುದಾಯಕ್ಕೆ ಶೇ 1, ಮಾದಿಗ ಸಮುದಾಯಕ್ಕೆ ಶೇ 6.5, ಮಾಲ ವರ್ಗಕ್ಕೆ ಶೇ 7.5ರಷ್ಟು ಮೀಸಲಾತಿ ನೀಡುವಂತೆ ಆಯೋಗವು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.