
ಪಿಟಿಐ
ಅಮರಾವತಿ: ಆಂಧ್ರಪ್ರದೇಶದ ಕೆಲವೆಡೆ ಹಕ್ಕಿಜ್ವರದಿಂದಾಗಿ ಕೋಳಿಗಳು ಮೃತಪಟ್ಟಿರುವ ಕಾರಣ ಅಲ್ಲಿನ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ.
‘ಚಿತ್ತೂರು ಮತ್ತು ಅಣ್ಣಮಯ್ಯ ಜಿಲ್ಲೆಗಳ ಕೆಲ ಭಾಗಗಳಲ್ಲಿ ಶನಿವಾರ ಸುಮಾರು 40 ಮತ್ತು ಭಾನುವಾರ 50 ಕೋಳಿಗಳು ಮೃತಪಟ್ಟಿದ್ದವು. ಈ ಹಕ್ಕಿಗಳಲ್ಲಿ ಹಕ್ಕಿ ಜ್ವರ ಸೋಂಕು ಇದ್ದುದು ಪರೀಕ್ಷೆಯಲ್ಲಿ ದೃಢಪಟ್ಟಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸರ್ಕಾರವು ಮನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸೋಂಕು ಪತ್ತೆಯಾದ ಗ್ರಾಮಗಳಲ್ಲಿ ತುರ್ತು ಸ್ಪಂದನಾ ತಂಡಗಳನ್ನು ನಿಯೋಜಿಸಲಾಗಿದೆ’ ಎಂದು ಆಂಧ್ರಪ್ರದೇಶದ ಪಶುಸಂಗೋಪನಾ ಸಚಿವ ಕಿಂಜರಪು ಅಚ್ಚನಾಯ್ಡು ಅವರು ತಿಳಿಸಿದ್ದಾರೆ.
‘ಹಕ್ಕಿಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಜನರು ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.