ADVERTISEMENT

ಆಂಧ್ರಕ್ಕೆ ಮೂರು ರಾಜಧಾನಿ: ಅನುಮೋದನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 22:08 IST
Last Updated 31 ಜುಲೈ 2020, 22:08 IST

ಅಮರಾವತಿ (ಪಿಟಿಐ): ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಮಂಡಿಸಿದ್ದ ‘ಮೂರು ರಾಜಧಾನಿಗಳ ಮಸೂದೆ’ಗೆ ರಾಜ್ಯಪಾಲ ವಿಶ್ವಭೂಷಣ್‌ ಹರಿಚಂದ್ರನ್‌ ಒಪ್ಪಿಗೆ ನೀಡಿದ್ದಾರೆ.

ಎರಡು ಮಸೂದೆಗಳನ್ನು ಜನವರಿ 20 ಮತ್ತು ಜೂನ್ 16ರಂದು ಶಾಸಕಾಂಗವುಎರಡು ಬಾರಿ ಅಂಗೀಕರಿಸಿತ್ತು. ಇದೀಗ ಅಧಿಕೃತ ಒಪ್ಪಿಗೆಯನ್ನು ರಾಜ್ಯಪಾಲರು ನೀಡಿದ್ದಾರೆ.ಕಾಯ್ದೆ ಜಾರಿ ವಿರೋಧಿಸಿ ಈಗಾಗಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ, ವಿಚಾರಣೆ ಆರಂಭವಾಗಿರಲಿಲ್ಲ.

ಕಾಯ್ದೆಯನ್ವಯ ವಿಶಾಖಪಟ್ಟಣ, ಅಮರಾವತಿ ಮತ್ತು ಕರ್ನೂಲ್‌ ಕ್ರಮವಾಗಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ರಾಜಧಾನಿಗಳಾಗಲಿವೆ. ಇದಲ್ಲದೆ ಆಡಳಿತ ವಲಯಗಳ ಮರು ವಿಂಗಡಣೆ ಮತ್ತು ಅಭಿವೃದ್ಧಿ ಮಂಡಳಿಗಳ ಸ್ಥಾಪನೆಗೂ ಕಾಯ್ದೆಯು ಅವಕಾಶ ನೀಡಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.