ADVERTISEMENT

ದೇಶಮುಖ್‌ ರಾಜೀನಾಮೆ ಇಲ್ಲ: ನಿಲುವು ಬದಲಿಸಿದ ಎನ್‌ಸಿಪಿ

ಗಮನ ಬೇರೆಡೆಗೆ ಸೆಳೆಯುವ ಷಡ್ಯಂತ್ರ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 20:04 IST
Last Updated 21 ಮಾರ್ಚ್ 2021, 20:04 IST
ಅನಿಲ್‌ ದೇಶಮುಖ್‌
ಅನಿಲ್‌ ದೇಶಮುಖ್‌   

ನವದೆಹಲಿ: ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ರಾಜೀನಾಮೆ ಸಾಧ್ಯತೆಯ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸುಳಿವು ನೀಡಿದ ಗಂಟೆಯೊಳಗೆ ಪಕ್ಷವು ತನ್ನ ನಿಲುವು ಬದಲಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.

ಭ್ರಷ್ಟಾಚಾರ ಆರೋಪದಿಂದ ಬೇಸರಗೊಂಡಂತಿರುವ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಸೋಮವಾರ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭಾನುವಾರ ಹೇಳಿದ್ದರು. ಆದರೆ ರಾತ್ರಿ ಪಕ್ಷದ ರಾಜ್ಯ ವರಿಷ್ಠ ಜಯಂತ್‌ ಪಾಟೀಲ್‌ ಹೇಳಿಕೆ ನೀಡಿ, ಉದ್ಯಮಿ ಮನ್‌ಸುಖ್‌ ಹಿರೇನ್‌ ನಿಗೂಢ ಸಾವು ಮತ್ತು ಉದ್ಯಮಿ ಮುಕೇಶ್ ಅಂಬಾನಿ ಮನೆಯ ಬಳಿ ಸ್ಫೋಟಕ ಪತ್ತೆ ಪ್ರಕರಣದಿಂದ ಗಮನ ಬೇರೆಡೆಗೆ ಸೆಳೆಯಲು ಈ ತಂತ್ರ ಹೂಡಲಾಗಿದೆ ಎಂದು ಆರೋಪಿಸಿದರು.

ಮುಂಬೈಯ ಮಾಜಿ ಪೊಲೀಸ್‌ ಆಯುಕ್ತರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌, ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್ ಒತ್ತಡ ಹಾಕುತ್ತಿದ್ದಂತೆ ಎನ್‌ಸಿಪಿ ಪಾಳಯದಲ್ಲೂ ಬಿರುಸಿನ ಚರ್ಚೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.