ADVERTISEMENT

Amarnath Yatra | ಜೂನ್‌ 29ರಿಂದ ವಾರ್ಷಿಕ ಅಮರನಾಥ ಯಾತ್ರೆ ಆರಂಭ

ಪಿಟಿಐ
Published 14 ಏಪ್ರಿಲ್ 2024, 10:19 IST
Last Updated 14 ಏಪ್ರಿಲ್ 2024, 10:19 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪ್ರಸಕ್ತ ಸಾಲಿನಡಿ ಅಮರನಾಥ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಜೂನ್‌ 29ರಿಂದ ಆರಂಭಗೊಂಡು, ಆಗಸ್ಟ್‌ 19ರಂದು ಕೊನೆಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಇಂದು (ಭಾನುವಾರ) ಪ್ರಕಟಿಸಿದೆ.

52 ದಿನಗಳ ಯಾತ್ರೆಗೆ ಮುಂಗಡ ನೋಂದಣಿಯನ್ನು ಏಪ್ರಿಲ್‌ 15ರಿಂದ ಆರಂಭಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಅಮರನಾಥ ದೇವಾಲಯವು ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ ನೆಲೆಗೊಂಡಿದ್ದು, ಸುಮಾರು 3,880 ಮೀಟರ್‌ ಎತ್ತರವಿದೆ.

ADVERTISEMENT

ವಾರ್ಷಿಕ ಯಾತ್ರೆಯು ಅನಂತ್‌ನಾಗ್‌ ಜಿಲ್ಲೆಯ ಪಹಲ್ಗಾಮ್‌ ಮತ್ತು ಗಾಂದರ್‌ಬಲ್‌ ಜಿಲ್ಲೆಯ ಬಾಲ್‌ಟಾಲ್‌ ಮಾರ್ಗಗಳಿಂದ ಪ್ರಾರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.