ADVERTISEMENT

ದೆಹಲಿಯಲ್ಲಿ ಶುಕ್ರವಾರವೂ ವಿಪರೀತ ಚಳಿ ಮುಂದುರಿಯುವ ಸಾಧ್ಯತೆ

ಪಿಟಿಐ
Published 18 ಡಿಸೆಂಬರ್ 2020, 5:31 IST
Last Updated 18 ಡಿಸೆಂಬರ್ 2020, 5:31 IST
ದೆಹಲಿಯ ವಿಪರೀತ ಚಳಿಗೆ ಹೊದಿಕೆ ಹೊದ್ದು ಕುಳಿತಿರುವ ಕುಟುಂಬವೊಂದರ ದೃಶ್ಯ (ಪಿಟಿಐ)
ದೆಹಲಿಯ ವಿಪರೀತ ಚಳಿಗೆ ಹೊದಿಕೆ ಹೊದ್ದು ಕುಳಿತಿರುವ ಕುಟುಂಬವೊಂದರ ದೃಶ್ಯ (ಪಿಟಿಐ)   

ನವದೆಹಲಿ: ಪಶ್ಚಿಮ ಹಿಮಾಲಯದಿಂದ ಶೀತ ಗಾಳಿ ಬೀಸುತ್ತಿರುವ ಪರಿಣಾಮ ಶುಕ್ರವಾರವೂ ದೆಹಲಿಯಲ್ಲಿ ವಿಪರೀತ ಚಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಇಲ್ಲಿ ಶುಕ್ರವಾರ ಕನಿಷ್ಠ ತಾಪಮಾನವು 4.4 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ ಎಂದು ಸಫ್ದರ್ಜಂಗ್ ವೀಕ್ಷಣಾಲಯ ತಿಳಿಸಿದೆ. ಪಾಲಂ ಹವಾಮಾನ ಕೇಂದ್ರದಲ್ಲಿ ಕನಿಷ್ಠ ತಾಪಮಾನ 3.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ದೆಹಲಿಯಲ್ಲಿ ಗುರುವಾರ ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್‌ ಇತ್ತು ಎಂದು ಐಎಂಡಿ ತಿಳಿಸಿದೆ.

ADVERTISEMENT

ದೆಹಲಿಯಲ್ಲಿ ಶನಿವಾರ ‘ಶೀತ ಅಲೆ’ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಮನ್ಸೂಚನೆ ನೀಡಲಾಗಿದ್ದು, ಸೋಮವಾರದ ತನಕ ಚಳಿ ಹೀಗೆ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.