ADVERTISEMENT

ಜಮ್ಮು: ಉಗ್ರರ ದಾಳಿ ಖಂಡಿಸಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ

ಪಿಟಿಐ
Published 22 ಏಪ್ರಿಲ್ 2025, 19:35 IST
Last Updated 22 ಏಪ್ರಿಲ್ 2025, 19:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಜಮ್ಮು: ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿ ರಾಷ್ಟ್ರೀಯ ಬಜರಂಗ ದಳ ಮತ್ತು ಭಾರತೀಯ ಜನತಾ ಮೋರ್ಚಾ ಸಂಘಟನೆಗಳು ಮಂಗಳವಾರ ಜಮ್ಮುವಿನ ವಿವಿಧೆಡೆ ಪ್ರತಿಭಟನೆ ನಡೆಸಿದವು. ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ, ಅದರ ಧ್ವಜವನ್ನು ಸುಡಲಾಯಿತು.

ADVERTISEMENT

‘ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ’ ಎಂದು ಪ್ರತಿಭಟನಕಾರರು ಆಗ್ರಹಿಸಿದರು. 

‘ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅಮರನಾಥ ಯಾತ್ರೆಯು ಆರಂಭಗೊಳ್ಳುವುದರಲ್ಲಿ ಇತ್ತು. ಯಾತ್ರೆಗಾಗಿ ನೋಂದಣಿ ಪ್ರಕ್ರಿಯೆಯು ಆರಂಭಗೊಂಡಿತ್ತು. ಇದೇ ವೇಳೆಯೇ ದಾಳಿ ನಡೆದಿದೆ’ ಎಂದು ಬಜರಂಗ ದಳದ ಅಧ್ಯಕ್ಷ ರಾಕೇಶ್‌ ಕುಮಾರ್‌ ಹೇಳಿದರು.

‘ಜನರನ್ನು ಕೊಲ್ಲುವ ಮುನ್ನ ಅವರ ಗುರುತನ್ನು ಕೇಳಲಾಯಿತು ಎಂದು ದಾಳಿಯಲ್ಲಿ ಬದುಕುಳಿದವರು ಹೇಳುತ್ತಿದ್ದಾರೆ. ಇದೊಂದು ಉದ್ದೇಶಿತ ದಾಳಿ ಎಂದು ಇದರಿಂದಲೇ ತಿಳಿಯುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.