ADVERTISEMENT

ಆಂಧ್ರ| ಆ್ಯಪಲ್‌ಗೆ ಪರಿಕರ ಪೂರೈಸುವ ಫಾಕ್ಸ್‌ಲಿಂಕ್ ಘಟಕಕ್ಕೆ ಬೆಂಕಿ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 16:09 IST
Last Updated 27 ಫೆಬ್ರುವರಿ 2023, 16:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೈದರಾಬಾದ್‌: ಆ್ಯಪಲ್‌ಗೆ ಪರಿಕರಗಳನ್ನು ಪೂರೈಸುವ ಫಾಕ್ಸ್‌ಲಿಂಕ್‌ನ ಆಂಧ್ರ ಪ್ರದೇಶ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿ, ಅಪಾರ ನಷ್ಟವುಂಟಾಗಿದೆ. ಈ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದ್ದು, 400 ಉದ್ಯೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಐಫೋನ್‌ಗಳಿಗೆ ಬೇಕಾದ ಕೇಬಲ್‌ಗಳನ್ನು ಪಾಕ್ಸ್‌ಲಿಂಕ್‌ ಪೂರೈಕೆ ಮಾಡುತ್ತದೆ. ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಶೇ 50ರಷ್ಟು ಯಂತ್ರೋಪಕರಣಗಳು ಹಾನಿಗೊಳಗಾಗಿದ್ದು, ಕಾರ್ಖಾನೆ ಕಟ್ಟಡದ ಅರ್ಧದಷ್ಟು ಭಾಗ ಕುಸಿದಿದೆ ಎಂದು ತಿರುಪತಿ ಜಿಲ್ಲೆಯ ವಿಪತ್ತು ನಿರ್ವಹಣಾ ಹಾಗೂ ಅಗ್ನಿಶಾಮಕ ಸೇವೆಗಳ ಇಲಾಖೆಯ ಜೆ ರಮಣಯ್ಯ ಹೇಳಿದ್ದಾರೆ.

ದುರಂತದಿಂದಾಗಿ ₹100 ಕೋಟಿಯಷ್ಟು ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಘಟನೆ ಬಗ್ಗೆ ಆಪಲ್ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಫಾಕ್ಸ್‌ಲಿಂಕ್‌ನ ಅಧಿಕಾರಿಗಳಿಂದಲೂ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.