ADVERTISEMENT

ಚೆನಾಬ್‌ ರೈಲ್ವೆ ಸೇತುವೆಯ ಕಮಾನು ಕಾಮಗಾರಿ ಪೂರ್ಣ

ಪಿಟಿಐ
Published 6 ಏಪ್ರಿಲ್ 2021, 2:14 IST
Last Updated 6 ಏಪ್ರಿಲ್ 2021, 2:14 IST
ಪೂರ್ಣಗೊಂಡಿರುವ ಸೇತುವೆಯ ಕಮಾನು ನಿರ್ಮಾಣ  -ಪಿಟಿಐ ಚಿತ್ರ
ಪೂರ್ಣಗೊಂಡಿರುವ ಸೇತುವೆಯ ಕಮಾನು ನಿರ್ಮಾಣ  -ಪಿಟಿಐ ಚಿತ್ರ   

ಕೌಡಿ: ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿಎತ್ತರದ ರೈಲ್ವೆ ಸೇತುವೆಯ ಕಮಾನು ಕಾಮಗಾರಿ ಸೋಮವಾರ ಪೂರ್ಣಗೊಂಡಿದ್ದು, ಇದು ಸಾಧನೆಯ ಮೈಲಿಗಲ್ಲು ಎಂದು ಉತ್ತರ ರೈಲ್ವೆ ಇಲಾಖೆ ಹೇಳಿದೆ.

‘1.3 ಕಿಲೋಮೀಟರ್ ಉದ್ದದ ಈ ಸೇತುವೆ ಕಾಶ್ಮೀರ ಕಣಿವೆಯ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಸೇತುವೆಯು ನೆಲಮಟ್ಟದಿಂದ 359 ಮೀಟರ್ ಎತ್ತರವಿದ್ದು, ಇದು ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರ ಇದೆ’ ಎಂದು ಉತ್ತರ ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಅಶುತೋಷ್ ಗಂಗಲ್ ಹೇಳಿದ್ದಾರೆ.

‘ಗಂಟೆಗೆ 266 ಕಿ.ಮೀ. ವೇಗದಲ್ಲಿ ಬೀಸುವ ಗಾಳಿ ಮತ್ತು ಹೆಚ್ಚಿನ ತೀವ್ರತೆಯ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಈ ಸೇತುವೆಗಿದೆ. ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.