ADVERTISEMENT

ನಿಷೇಧ ಭೀತಿ: ಆರ್ಚರಿ ಸಂಸ್ಥೆಗೆ ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:46 IST
Last Updated 19 ಜೂನ್ 2019, 19:46 IST

ಕೋಲ್ಕತ್ತ: ವಿಶ್ವ ಆರ್ಚರಿ ಸಂಸ್ಥೆಯು, ಭಾರತ ಅರ್ಚರಿ ಸಂಸ್ಥೆ (ಎಎಐ) ಯನ್ನು ಸದಸ್ಯ ರಾಷ್ಟ್ರಗಳ ಪಟ್ಟಿಯಿಂದ ಕಿತ್ತುಹಾಕಿದೆ. ಎಎಐ ಬಣಗಳು ಆಂತರಿಕ ಕಚ್ಚಾಟವನ್ನು ಸರಿಪಡಿಸಿಕೊಳ್ಳಬೇಕು ಇಲ್ಲವೇ ನಿಷೇಧಕ್ಕೆ ತಯಾರಾಗಬೇಕು ಎಂದು ಅದು ಗಡುವು ನೀಡಿದೆ.

ಎಎಐ ಮೇಲೆ ನಿಷೇಧ ಹೇರುವ ಸಂಬಂಧ ಜುಲೈ 31ರವರೆಗೆ ಕಾಯುವುದಾಗಿ ವಿಶ್ವ ಆರ್ಚರಿ ಸಂಸ್ಥೆ (ಡಬ್ಲ್ಯುಐ) ಹೇಳಿದೆ. ಎಎಐಗೆ ನಡೆದ ವಿವಾದಾತ್ಮಕ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪಿಗೆ ಕಾಯುತ್ತಿರುವುದಾಗಿಯೂ ತಿಳಿಸಿದೆ.

ಸದಸ್ಯತ್ವದಿಂದ ತೆಗೆದುಹಾಕಿದರೂ, ಭಾರತೀಯ ಬಿಲ್ಗಾರರು ಈಗಾಗಲೇ ನೋಂದಾಯಿಸಿರುವ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ರಾಷ್ಟ ಧ್ವಜದಡಿ ಪಾಲ್ಗೊಳ್ಳಲು ಅಡ್ಡಿಯಾಗುವುದಿಲ್ಲ. ಕಾನೂನುಬದ್ಧ ಪ್ರಾತಿನಿಧ್ಯ ಇಲ್ಲದಿರುವುದರಿಂದ ಭಾರತವು ವಿಶ್ವ ಆರ್ಚರಿ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಇರುವುದಿಲ್ಲ. ವಿಶ್ವ ಆರ್ಚರಿ ಸಂಸ್ಥೆಯು, ಜುಲೈ 31ರವರೆಗೆ ಎಎಐ ಬೆಳವಣಿಗೆಗಳನ್ನು ಕಾದುನೋಡಲಿದೆ. ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಆಧಾರದ ಮೇಲೆ ತೀರ್ಮಾನಕ್ಕೆ ಬರಲಾಗುವುದು ಎಂದು ಎರಡು ಪುಟಗಳ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.