ADVERTISEMENT

ಚಂಡೀಗಢ | ಶಸ್ತ್ರಾಸ್ತ್ರ ಕಳ್ಳಸಾಗಣೆ: 7 ಮಂದಿ ಬಂಧನ

ಗುಪ್ತಚರ ಮಾಹಿತಿ ಆಧರಿಸಿ ಪಂಜಾಬ್‌ ಪೊಲೀಸರ ಕಾರ್ಯಾಚರಣೆ

ಪಿಟಿಐ
Published 31 ಅಕ್ಟೋಬರ್ 2025, 14:18 IST
Last Updated 31 ಅಕ್ಟೋಬರ್ 2025, 14:18 IST
...
...   

ಚಂಡೀಗಢ: ‍ಪಾಕಿಸ್ತಾನದೊಂದಿಗೆ ನಂಟು ಹೊಂದಿದೆ ಎನ್ನಲಾಗಿರುವ ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಪಂಜಾಬ್ ಪೊಲೀಸರು ಶುಕ್ರವಾರ ಭೇದಿಸಿದ್ದಾರೆ.

ಗುಪ್ತಚರ ಮಾಹಿತಿಗಳನ್ನು ಆಧರಿಸಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸ್‌ ಮಹಾನಿರ್ದೇಶಕ ಗೌರವ್ ಯಾದವ್‌ ಅವರು ಕಾರ್ಯಾಚರಣೆ ಕುರಿತು ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಗಪ್ತಚರ ಮಾಹಿತಿಗಳ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಶೇರ್‌ ಸಿಂಗ್‌ ಅಲಿಯಾ ಸಿಮಾ, ಅಮನ್‌ದೀಪ್‌ ಸಿಂಗ್‌ ಅಲಿಯಾಸ್‌ ಬಾಬಿ, ಬಲ್ವಿಂದರ್‌ ಸಿಂಗ್‌ ಅಲಿಯಾಸ್‌ ಕಾಕಾ, ಗುರುದೇವ್‌ ಸಿಂಗ್‌, ಕರಣ್‌ಪ್ರೀತ್‌ ಸಿಂಗ್‌, ಹರ್ಮನ್‌ ಸಿಂಗ್‌ ಮತ್ತು ಕಾನೂನಿನ ಎದುರು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಅಮೃತಸರದ ನಿವಾಸಿಗಳು’ ಎಂದು ಯಾದವ್‌ ತಿಳಿಸಿದ್ದಾರೆ.

ADVERTISEMENT

 ಅಲ್ಲದೇ, ಆರೋಪಿಗಳಿಂದ 9ಎಂಎಂನ ಒಂಬತ್ತು ಗ್ಲಾಕ್‌ ಪಿಸ್ತೂಲುಗಳು ಮತ್ತು 0.30 ಬೋರ್‌ನ ಆರು ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದಲ್ಲಿ ಕುಳಿತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವವರ ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಬಂಧಿತರು ಸಂಪರ್ಕ ಹೊಂದಿದ್ದರು. ನಿರಂತರವಾಗಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಪಂಜಾಬ್‌ನಾದ್ಯಂತ ‍ಪೂರೈಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಸಂಪೂರ್ಣ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಿ, ಅದನ್ನು ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದೂ ಯಾದವ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.