ADVERTISEMENT

ಪೂರ್ವಲಡಾಖ್‌: ಸಿಬ್ಬಂದಿಗೆ ಚೀನಿ ಭಾಷೆ ತರಬೇತಿ ಹೆಚ್ಚಿಸಿದ ಸೇನೆ

Army focuses on imparting Mandarin language training to its personnel

ಪಿಟಿಐ
Published 10 ಜುಲೈ 2022, 15:40 IST
Last Updated 10 ಜುಲೈ 2022, 15:40 IST

ನವದೆಹಲಿ: ಪೂರ್ವಲಡಾಖ್‌ನಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆ ಭಾಗದಲ್ಲಿ (ಎಲ್‌ಎಸಿ) 3,400ಕ್ಕೂ ಹೆಚ್ಚು ಜನರ ಕಣ್ಗಾವಲು ಹೆಚ್ಚಿಸುವ ಒಟ್ಟಾರೆ ತಂತ್ರದ ಭಾಗವಾಗಿ ಭಾರತೀಯ ಸೇನೆಯು ತನ್ನ ಸಿಬ್ಬಂದಿಗೆ ಚೀನಿ ಭಾಷೆಯ ತರಬೇತಿ ನೀಡುವ ಪ್ರಯತ್ನವನ್ನು ಹೆಚ್ಚಿಸಿದೆ.

ಚೀನಾದ ಮಿಲಿಟರಿ ಸಿಬ್ಬಂದಿಯೊಂದಿಗೆ ಪರಿಸ್ಥಿತಿಗೆ ತಕ್ಕಂತೆ ಸಂವಹನ ನಡೆಸಲು ಸೇನೆಯ ಕಿರಿಯ ಮತ್ತು ಹಿರಿಯ ಕಮಾಂಡರ್‌ಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಚೀನಾ ಭಾಷೆಯಲ್ಲಿ ಪರಿಣತಿ ಸಾಧಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭದ್ರತಾ ವ್ಯವಸ್ಥೆಯ ಮೂಲಗಳು ಭಾನುವಾರ ತಿಳಿಸಿವೆ.

ಸೇನೆಯ ಉತ್ತರ, ಪೂರ್ವ ಮತ್ತು ಮಧ್ಯ ಕಮಾಂಡ್‌ಗಳಲ್ಲಿರುವ ಭಾಷಾ ಶಾಲೆಗಳಲ್ಲಿ ವಿವಿಧ ಮ್ಯಾಂಡರಿನ್ (ಚೀನಿ) ಭಾಷಾ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.