ADVERTISEMENT

ಜಮ್ಮು–ಕಾಶ್ಮೀರ: ಗಡಿನಿಯಂತ್ರಣ ರೇಖೆ ಬಳಿ ಸ್ಫೋಟ, ಯೋಧ ಹುತಾತ್ಮ

ಏಜೆನ್ಸೀಸ್
Published 17 ನವೆಂಬರ್ 2019, 14:01 IST
Last Updated 17 ನವೆಂಬರ್ 2019, 14:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ:ಜಮ್ಮು–ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಅಖನೂರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದ ಕಚ್ಚಾ ಬಾಂಬ್ ಸ್ಫೋಟದಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ಯೋಧರು ಸೇನಾ ಟ್ರಕ್‌ನಲ್ಲಿ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಉಧಂಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.

ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

ADVERTISEMENT

ಪಾಕಿಸ್ತಾನ ಪದೇ ಪದೆ ಕದನ ವಿರಾಮ ನಿಯಮ ಉಲ್ಲಂಘಿಸುತ್ತಿದ್ದು, ಭಾನುವಾರ ಜಮ್ಮು–ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣಾ ರೇಖೆಯ ಸಮೀಪವಿರುವ ಹಳ್ಳಿಗಳು ಹಾಗೂ ಭಾರತೀಯ ಸೇನಾ ನೆಲೆಗಳ ಮೇಲೆ ಶೆಲ್ಲಿಂಗ್‌ ದಾಳಿ ನಡೆಸಿದೆ.

ಭಾನುವಾರ ಬೆಳಗ್ಗೆ 10.15ರ ವೇಳೆಗೆ ಪಾಕಿಸ್ತಾನ ಸೇನೆ ಶಹಾಪುರ ಪ್ರದೇಶದಲ್ಲಿ ಅಪ್ರಚೋದಿತ ಮೊರ್ಟರ್‌ ಶೆಲ್‌ ದಾಳಿ ನಡೆಸಿದೆ. ಭಾರತೀಯ ಸೇನೆಯೂ ಪ್ರತಿ ದಾಳಿ ನಡೆಸಿದೆ. ಪಾಕಿಸ್ತಾನ ಉಡಾಯಿಸಿದ ಶೆಲ್‌ಗಳು ಪೂಂಛ್ ಜಿಲ್ಲೆಯ ಕೆರ್ನಿ ಹಾಗೂ ಕಸಬಾ ಪ್ರದೇಶಗಳ ಮೇಲೆಯೂ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್, ದಾಳಿಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.