ADVERTISEMENT

ಮಥುರಾ: ಅತ್ಯಾಚಾರ ಆರೋಪದಡಿ ಸೇನಾ ಸಿಬ್ಬಂದಿ ಬಂಧನ

ಪಿಟಿಐ
Published 27 ನವೆಂಬರ್ 2021, 14:14 IST
Last Updated 27 ನವೆಂಬರ್ 2021, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಥುರಾ: 21 ವರ್ಷದ ಮಹಿಳೆಗೆ ಡ್ರಗ್ಸ್‌ ನೀಡಿ, ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಸೇನಾ ಸಿಬ್ಬಂದಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

'ಸಂತ್ರಸ್ತೆ ಮತ್ತು ಆರೋಪಿ ತೇಜ್‌ವೀರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು. ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ’ ಎಂದು ಅವರು ಹೇಳಿದರು.

‘ಅವರಿಬ್ಬರು ನನಗೆ ಡ್ರಗ್ಸ್‌ ನೀಡಿದರು. ಬಳಿಕತೇಜ್‌ವೀರ್‌ ತನ್ನ ಮೇಲೆ ಅತ್ಯಾಚಾರವೆಸಗಿದರೆ, ದಿಗಂಬರ್‌ ಲೈಂಗಿಕ ಕಿರುಕುಳ ನೀಡಿದ. ನಂತರ ಅವರು ನನ್ನನ್ನು ಕೊಸಿ ಕಲಾನ್‌ ಪ್ರದೇಶದಲ್ಲಿ ಬಿಟ್ಟು ಹೋದರು’ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ADVERTISEMENT

‘ದಿಗಂಬರ್‌ನನ್ನು ಕೊಟಾಬನ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇಬ್ಬರು ಆರೋಪಿಗಳು ಹರಿಯಾಣದ ಪಲ್ವಾಲ್‌ನ ಮನ್ಪುರ ಗ್ರಾಮದ ನಿವಾಸಿಗಳು’ ಎಂದು ಅಧಿಕಾರಿಗಳು ಅವರು ಮಾಹಿತಿ ನೀಡಿದರು.

ಮಹಿಳೆಯ ಅತ್ಯಾಚಾರ, ಹತ್ಯೆ: (ಮುಂಬೈ ವರದಿ) 20 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದರು.

‘ಖಾಲಿಯಿದ್ದ 13 ಅಂತಸ್ತಿನ ವಸತಿ ಕಟ್ಟಡದ ತಾರಸಿಯಲ್ಲಿ ಮಹಿಳೆಯ ಕೊಳೆತ ಶವ ಗುರುವಾರ ಸಂಜೆ ಪತ್ತೆಯಾಗಿದೆ. ಕೆಲ ಯುವಕರು ವಿಡಿಯೊ ಶೂಟ್‌ ಮಾಡಲೆಂದು ತಾರಸಿಗೆ ಹೋಗಿದ್ದರು. ಈ ವೇಳೆ ಅವರಿಗೆ ಶವ ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿನೋಬಾ ಭಾವೆ ನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಹತ್ಯೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಅವರು ಹೇಳಿದರು.

‘ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಸಂತ್ರಸ್ತೆಯ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.