ADVERTISEMENT

ಭೂಕುಸಿತ: ಉತ್ತರಕಾಶಿಯಲ್ಲಿ ಸಿಲುಕಿರುವ ರಾಜಸ್ಥಾನದ ಯಾತ್ರಿಕರು

ಪಿಟಿಐ
Published 23 ಸೆಪ್ಟೆಂಬರ್ 2022, 13:30 IST
Last Updated 23 ಸೆಪ್ಟೆಂಬರ್ 2022, 13:30 IST
ಭೂಕುಸಿತ (ಸಾಂದರ್ಭಿಕ ಚಿತ್ರ)
ಭೂಕುಸಿತ (ಸಾಂದರ್ಭಿಕ ಚಿತ್ರ)   

ಜೈಪುರ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಗಂಗೋತ್ರಿ ಧಾಮದಿಂದ ಮರಳುತ್ತಿದ್ದ ರಾಜಸ್ಥಾನದ 400 ಮಂದಿ ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಕಾಶಿಯ ಗಬ್ನಾನಿಯ ಬಳಿ ಭೂಕುಸಿತ ಸಂಭವಿಸಿದ್ದು, ರಾಜಸ್ಥಾನದ ಭಿಲ್ವಾರ, ಅಜ್ಮೇರ್‌ ಮತ್ತು ಇತರೆಡೆಯ ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.

'ರಸ್ತೆಯಲ್ಲಿ ಸಿಲುಕಿಕೊಂಡಿರುವ ಯಾತ್ರಿಕರಿಗೆ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಕಮಾಂಡೆಂಟ್‌ ರಾಜ್‌ಕುಮಾರ್‌ ಗುಪ್ತಾ ತಿಳಿಸಿದ್ದಾರೆ.

ADVERTISEMENT

ಭಾರಿ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿ, ಉತ್ತರಕಾಶಿ ಮತ್ತು ಹರ್ಸಿಲ್ ನಡುವಿನ ರಸ್ತೆಯಲ್ಲಿ ಗುರುವಾರ ಸಂಜೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.