ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಜನರಗುಂಪೊಂದು ಶುಕ್ರವಾರ ದಾಳಿ ನಡೆಸಿದೆ.
ದೊಣ್ಣೆ ಮತ್ತು ಇತರ ಆಯುಧಧಾರಿಗಳಾದ ಜನರ ಗುಂಪು ಪಶ್ಚಿಮ ದೆಹಲಿಯ ನರೇಲಾ ಎಂಬಲ್ಲಿ ದಾಳಿ ನಡೆಸಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ದೆಹಲಿ ಸಿಎಂ ಕಚೇರಿ ಹೇಳಿದೆ.
100ರಷ್ಟು ಮಂದಿ ಕೇಜ್ರಿವಾಲ್ ಅವರ ಕಾರಿಗೆ ತಡೆಯೊಡ್ಡಿ ದೊಣ್ಣೆಯಿಂದ ಹೊಡೆದುಕಾರಿಗೆ ಹಾನಿ ಮಾಡಿದ್ದರು.
25 ಅನಧಿಕೃತ ಕಾಲೊನಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲು ಕೇಜ್ರಿವಾಲ್ ದೆಹಲಿಯ ಹೊರವಲಯಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.