ADVERTISEMENT

ಇಂದು ಮಧ್ಯಾಹ್ನದ ಹೊತ್ತಿಗೆ ಆರ್ಯನ್‌ ಖಾನ್‌ ಬಿಡುಗಡೆ: ಜೈಲು ಅಧಿಕಾರಿಗಳ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2021, 4:56 IST
Last Updated 30 ಅಕ್ಟೋಬರ್ 2021, 4:56 IST
ಆರ್ಥರ್‌ ಜೈಲು ಹೊರಗೆ ಬಿಗಿ ಭದ್ರತೆ
ಆರ್ಥರ್‌ ಜೈಲು ಹೊರಗೆ ಬಿಗಿ ಭದ್ರತೆ    

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಯಾಗಿ ಜೈಲು ಸೇರಿರುವ ಆರ್ಯನ್‌ ಖಾನ್‌ ಅವರು ಇಂದು ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಲಿದ್ದಾರೆ. ಇದೇ ದಿನ ಬಿಡುಗಡೆ ಹೊಂದುತ್ತಿರುವ ಇತರ ಕೈದಿಗಳ ಜೊತೆಗೆ ಅವರನ್ನೂ ಬಂಧಮುಕ್ತಗೊಳಿಸಲಾಗುವುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಿವುಡ್‌ ನಟ ಶಾರುಕ್‌ ಖಾನ್‌ ಮಗ ಆರ್ಯನ್‌ ಖಾನ್‌ ಅವರಿಗೆ ಅ. 28ರಂದು ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳ ಕಾರಣದಿಂದಾಗಿ ಜಾಮೀನಿನ ಹೊರತಾಗಿಯೂ ಆರ್ಯನ್‌ ಖಾನ್‌ ಶನಿವಾರದ ವರೆಗೆ ಜೈಲಿನಲ್ಲಿ ಇರಬೇಕಾಗಿ ಬಂದಿತ್ತು.

ಬಿಡುಗಡೆ ಪ್ರಕ್ರಿಯೆ ಕುರಿತು ಮಾತನಾಡಿರುವ ‘ಆರ್ಥರ್‌ ರೋಡ್‌ ಜೈಲು’ ಸೂಪರಿಂಡೆಂಟ್‌ ನಿತಿನ್‌ ವೈಚಲ್‌, ‘ಬಿಡುಗಡೆ ಆದೇಶ ನಮ್ಮ ಕೈ ಸೇರಿದೆ. ಇನ್ನು ಒಂದೆರಡು ಗಂಟೆಯಲ್ಲಿ ಆರ್ಯನ್‌ ಖಾನ್‌ ಅವರನ್ನು ಬಿಡುಗಡೆಗೊಳಿಸಲಾಗುವುದು. ಪ್ರಕ್ರಿಯೆಗಳು ಸಾಗಿವೆ,‘ ಎಂದು ತಿಳಿಸಿದ್ದಾರೆ.

ADVERTISEMENT

ಪುತ್ರನ ಬಿಡುಗಡೆ ಹಿನ್ನೆಲೆಯಲ್ಲಿ ಶಾರುಕ್‌ ಖಾನ್‌ ಅವರು ಜೈಲು ಬಳಿಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.