ADVERTISEMENT

ಕೋವಿಡ್‌ ನಿಯಂತ್ರಣ: ಶಿರಡಿಗೆ 10 ಸಾವಿರ ಭಕ್ತರ ಪ್ರವೇಶಕ್ಕೆ ಅವಕಾಶ

ಪಿಟಿಐ
Published 17 ನವೆಂಬರ್ 2021, 5:34 IST
Last Updated 17 ನವೆಂಬರ್ 2021, 5:34 IST
ಶಿರಸಿ ಸಾಯಿಬಾಬಾ
ಶಿರಸಿ ಸಾಯಿಬಾಬಾ   

ಶಿರಡಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದರಿಂದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿ ದಿನ 10 ಸಾವಿರ ಭಕ್ತರ ಭೇಟಿಗೆ ಅಹ್ಮದ್‌ನಗರ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.

ಅಕ್ಟೋಬರ್ 6ರಂದು ಹೊರಡಿಸಲಾದ ಆದೇಶದಂತೆ ಆನ್‌ಲೈನ್‌ ಪಾಸ್ ಹೊಂದಿದ 15 ಸಾವಿರ ಮಂದಿ ಪ್ರತಿದಿನ ದರ್ಶನ ಪಡೆಯಬಹುದಾಗಿದೆ. ಆ ಆದೇಶ ಮುಂದುವರಿಯಲಿದ್ದು, ಇದೀಗ ಆಫ್‌ಲೈನ್‌ ಪಾಸ್ ಹೊಂದಿದ 10 ಸಾವಿರ ಮಂದಿಗೂ ದರ್ಶನ ಅವಕಾಶ ಸಿಕ್ಕಿದೆ. ಹೀಗಾಗಿ ಪ್ರತಿದಿನ 25 ಸಾವಿರ ಭಕ್ತರು ದರ್ಶನ ಪಡೆಯುವುದು ಸಾಧ್ಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಸದ್ಯ ಪ್ರತಿದಿನ ಕೋವಿಡ್‌ ದೃಢ ಪ್ರಮಾಣ 1 ಸಾವಿರಕ್ಕಿಂತ ಕಡಿಮೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.