ADVERTISEMENT

Assam flood: ಮುಂದುವರಿದ ಪ್ರವಾಹ ಪರಿಸ್ಥಿತಿ; 6 ಲಕ್ಷ ಜನರಿಗೆ ತೊಂದರೆ

ಪಿಟಿಐ
Published 2 ಜೂನ್ 2024, 6:13 IST
Last Updated 2 ಜೂನ್ 2024, 6:13 IST
<div class="paragraphs"><p>ಅಸ್ಸಾಂ ಪ್ರವಾಹ</p></div>

ಅಸ್ಸಾಂ ಪ್ರವಾಹ

   

(ಪಿಟಿಐ ಚಿತ್ರ)

ಗುವಾಹಟಿ: ಅಸ್ಸಾಂನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಮುಂದುವರಿದಿದೆ. 10 ಜಿಲ್ಲೆಗಳಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ADVERTISEMENT

ರೀಮಲ್ ಚಂಡಮಾರುತದ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಯಿತು. ಅನೇಕ ಪ್ರದೇಶಗಳಲ್ಲಿ ಪ್ರವಾಹಪೀಡಿತ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದ್ದಾರೆ.

ಕೊಪಿಲಿ, ಬರಾಕ್, ಕುಶಿಯಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಹೈಲಕಂಡಿ ಹೊಜೈ, ಮೊರಿಗಾಂವ್, ಕರೀಂಗಂಜ್, ನಾಗಾಂವ್, ಕಾಚಾರ್, ದಿಬ್ರುಗಢ, ಗೋಲಾಘಾಟ್, ಕರ್ಬಿ ಆಂಗ್‌ಲೋಂಗ್ ಮತ್ತು ದಿಮಾ ಹಸಾಒ ಜಿಲ್ಲೆಗಳಲ್ಲಿ ಒಟ್ಟು 6,01,642 ಜನರು ಪ್ರವಾಹದಿಂದಾಗಿ ತೊಂದರೆಗೀಡಾಗಿದ್ದಾರೆ.

ಮೇ 28ರಿಂದ ಪ್ರವಾಹ ಹಾಗೂ ಚಂಡಮಾರುತದಿಂದಾಗಿ ಮೃತಪಟ್ಟವರ ಸಂಖ್ಯೆ 15 ಆಗಿದೆ ಎಂದು ಅವರು ತಿಳಿಸಿದ್ದಾರೆ. ಹಲವು ಕಡೆಗಳಲ್ಲಿ ರಸ್ತೆ ಹಾಗೂ ರೈಲು ಸಂಪರ್ಕ ಕಡಿದುಕೊಂಡಿದೆ.

ನಾಗಾಂವ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, 2.79 ಲಕ್ಷಕ್ಕೂ ಅಧಿಕ ಮಂದಿ ತೊಂದರೆಗೀಡಾಗಿದ್ದಾರೆ. ಹೊಜೈಯಲ್ಲಿ 1.26 ಲಕ್ಷ ಮತ್ತು ಕಾಚಾರ್‌ನಲ್ಲಿ 1.12 ಲಕ್ಷ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ 40,000ಕ್ಕೂ ಹೆಚ್ಚು ಮಂದಿ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯಾಡಳಿತ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಅಸ್ಸಾಂ ಪ್ರವಾಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.