ADVERTISEMENT

ಅಸ್ಸಾಂ ಪ್ರವಾಹ: 3.63 ಲಕ್ಷ ಮಂದಿಗೆ ಸಂಕಷ್ಟ

ಪಿಟಿಐ
Published 30 ಆಗಸ್ಟ್ 2021, 22:03 IST
Last Updated 30 ಆಗಸ್ಟ್ 2021, 22:03 IST
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ -ಎಎಫ್‌ಪಿ ಚಿತ್ರ
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ -ಎಎಫ್‌ಪಿ ಚಿತ್ರ   

ಗುವಾಹಟಿ: ಅಸ್ಸಾಂನಲ್ಲಿ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಮಳೆ ಸಂಬಂಧಿ ಅವಘಡಕ್ಕೆ ಸೋಮವಾರ ಇಬ್ಬರು ಬಲಿಯಾಗಿದ್ದಾರೆ. ಪ್ರವಾಹದಿಂದಾಗಿ 17 ಜಿಲ್ಲೆಗಳ ಸುಮಾರು 3.63 ಲಕ್ಷ ಜನರು ಸಂಕಷ್ಟಕ್ಕಿಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರ್ಪೇಟಾ ಜಿಲ್ಲೆಯ ಚೆಂಗಾದಲ್ಲಿ ಮತ್ತು ಮಯಂಗ್‌ನಲ್ಲಿ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಪಿಥೋರಗಡ ವರದಿ: ಉತ್ತರಾಖಂಡದ ಪಿಥೋರಗಡ ಜಿಲ್ಲೆಯ ಧರ್ಚುಲಾ ಉಪ ವಿಭಾಗದ ಜುಮ್ಮಾ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಮೂರು ಮನೆಗಳು ಕುಸಿದುಬಿದ್ದು ಮೂವರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.