ADVERTISEMENT

ಅಸ್ಸಾಂ: ಶಾಲಾ ಶಿಕ್ಷಕರಿಗೆ ವಸ್ತ್ರ ಸಂಹಿತೆ

​ಪ್ರಜಾವಾಣಿ ವಾರ್ತೆ
Published 20 ಮೇ 2023, 16:06 IST
Last Updated 20 ಮೇ 2023, 16:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಅಸ್ಸಾಂ ಸರ್ಕಾರವು ಶಾಲಾ ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿದೆ.

‘ಕೆಲ ಶಿಕ್ಷಕರು ತಮ್ಮಿಷ್ಟದ, ಕಣ್ಣು ಕುಕ್ಕುವಂತಹ ಉಡುಪುಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಪ್ಪತಕ್ಕದ್ದಲ್ಲ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ’ ಎಂದು ಶುಕ್ರವಾರ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.  

‘ಶಿಕ್ಷಕರು ಇನ್ನು ಮುಂದೆ ‘ಫಾರ್ಮಲ್‌’ ದಿರಿಸಿನಲ್ಲಿ (ಪ್ಯಾಂಟ್‌ ಮತ್ತು ಅಂಗಿ) ಶಾಲೆಗಳಿಗೆ ಹಾಜರಾಗಬೇಕು. ಶಿಕ್ಷಕಿಯರು ಸೀರೆ, ಸಭ್ಯ ರೀತಿಯ ಸಲ್ವಾರ್‌ ಸೂಟ್‌ಗಳನ್ನಷ್ಟೇ ಉಡಬೇಕು. ಇವು ತಿಳಿ ವರ್ಣದಿಂದ ಕೂಡಿರಬೇಕು. ಶಿಕ್ಷಕಿಯರು ಟಿ–ಶರ್ಟ್‌, ಜೀನ್ಸ್‌ ಮತ್ತು ಲೆಗ್ಗಿನ್ಸ್‌ಗಳನ್ನು ಧರಿಸುವಂತಿಲ್ಲ’ ಎಂದೂ ಹೇಳಲಾಗಿದೆ.

ADVERTISEMENT

ರಾಜ್ಯದ ಶಿಕ್ಷಣ ಸಚಿವ ರನೋಜ್‌ ಪೆಗು ಅವರು ಈ ಅಧಿಸೂಚನೆಯ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.