ADVERTISEMENT

Assam Mining Tragedy: 5ನೇ ದಿನದ ಕಾರ್ಯಾಚರಣೆಯಲ್ಲಿ ಮತ್ತೊಂದು ಮೃತದೇಹ ಪತ್ತೆ

ಪಿಟಿಐ
Published 11 ಜನವರಿ 2025, 5:54 IST
Last Updated 11 ಜನವರಿ 2025, 5:54 IST
<div class="paragraphs"><p>ಕಾರ್ಯಾಚರಣೆ</p></div>

ಕಾರ್ಯಾಚರಣೆ

   REUTERS/Stringer

ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಒಂಬತ್ತು ಕಾರ್ಮಿಕರ ಪೈಕಿ ಶನಿವಾರ ಮತ್ತೊಬ್ಬನ ಮೃತದೇಹವನ್ನು ಹೊರತೆಗೆಯಲಾಗಿದೆ.

ಕಳೆದ ಐದು ದಿನಗಳಿಂದ ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ADVERTISEMENT

ಬುಧವಾರ ಒಬ್ಬರ ಹಾಗೂ ಇಂದು (ಶನಿವಾರ) ಮತ್ತೊಬ್ಬರ ಮೃತದೇಹ ಹೊರತೆಗೆಯಲಾಗಿದೆ. ಗಣಿಯಲ್ಲಿ ಸಿಲುಕಿದ್ದ 9 ಕಾರ್ಮಿಕರ ಪೈಕಿ ಇಲ್ಲಿಯವರೆಗೆ ಇಬ್ಬರ ಶವಗಳು ಸಿಕ್ಕಿವೆ.

ಕಲ್ಲಿದ್ದಲು ಗಣಿ ದುರಂತದಲ್ಲಿ ಸಿಲುಕಿಕೊಂಡಿರುವ ಉಳಿದ ಏಳು ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಅವರು ಬದುಕುಳಿದಿರುವ ಸಾಧ್ಯತೆ ತೀರ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಮರಂಗಸೊದ 3 ಕಿ.ಮೀ. ಪ್ರದೇಶದಲ್ಲಿ ಸ್ಥಿತಗೊಂಡಿರುವ ಸ್ಥಳೀಯ ಕಲ್ಲಿದ್ದಲು ಗಣಿಯಲ್ಲಿ ಹಠಾತ್ ನೀರು ತುಂಬಿಕೊಂಡ ಪರಿಣಾಮ ಕಾರ್ಮಿಕರು ಸಿಲುಕಿಕೊಂಡಿದ್ದರು.

ರಕ್ಷಣಾ ತಂಡಗಳು ಗಣಿಯೊಳಗೆ ಸಮರೋಪಾದಿಯಲ್ಲಿ ದಿನದ 24 ಗಂಟೆಯೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.