ಶ್ರೀನಗರ: ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದ ಕುದುರೆ ಸವಾರ ಆದಿಲ್ ಶಾ ನಿವಾಸಕ್ಕೆ ಅಸ್ಸಾಂ ಕೃಷಿ ಸಚಿವ ಅತುಲ್ ಬೋರಾ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಆದಿಲ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಅವರು, ಅಸ್ಸಾಂ ಸರ್ಕಾರದ ಪರವಾಗಿ ₹5 ಲಕ್ಷ ಮೊತ್ತದ ಚೆಕ್ ಪರಿಹಾರವಾಗಿ ವಿತರಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಮನೆಗೆ ಏಕೈಕ ಆಧಾರವಾಗಿದ್ದ ಆದಿಶ್ ಶಾ ಉಗ್ರನಿಂದ ಹತ್ಯೆಯಾಗಿದ್ದಾನೆ. ಕುಟುಂಬಕ್ಕೆ ಉದ್ಯೋಗ ಕೊಡಿಸುವ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ’ ಎಂದು ಹೇಳಿದ್ದಾರೆ.
‘ಭಯೋತ್ಪಾದಕ ದಾಳಿಯನ್ನು ಇಡೀ ಜಗತ್ತೆ ಖಂಡಿಸಿದ್ದು, ಪ್ರತೀಕಾರದ ದಾಳಿಗೆ ನಮಗೆ ಬೆಂಬಲ ನೀಡಿವೆ. ನಾವೆಲ್ಲರೂ ಒಂದೇ ಆಗಿದ್ದು, ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾಗಲು ಬಯಸಿದ್ದು, ಅವರು ಹೊರಗಡೆ ಇರುವುದರಿಂದ ಅದು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.