ADVERTISEMENT

ಅಸ್ಸಾಂ: ಡ್ರೋನ್ ಕ್ಯಾಮರಾ ಬಳಸಿ ಲಾಕ್ ಡೌನ್ ಉಲ್ಲಂಘಿಸುವವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 1:39 IST
Last Updated 5 ಏಪ್ರಿಲ್ 2020, 1:39 IST
ಅಸ್ಸಾಂ ಪೊಲೀಸರು ಲಾಕ್ ಡೌನ್ ಆದೇಶ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಡ್ರೋನ್ ಕ್ಯಾಮರಾ ಬಳಸುತ್ತಿರುವುದು.
ಅಸ್ಸಾಂ ಪೊಲೀಸರು ಲಾಕ್ ಡೌನ್ ಆದೇಶ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಡ್ರೋನ್ ಕ್ಯಾಮರಾ ಬಳಸುತ್ತಿರುವುದು.   

ಅಸ್ಸಾಂ: ಕೊರೊನಾ ಸೋಂಕು ಹರಡುವಿಕೆ ತಡೆಗೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲ ರಾಜ್ಯಗಳಲ್ಲಿ ಜನರು ಗಣನೆಗೆ ತೆಗೆದುಕೊಳ್ಳದೇ ವಾಹನಗಳಲ್ಲಿ ಓಡಾಡುತ್ತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನು ತಡೆಯಲು ಅಸ್ಸಾಂನ ಗವಾಹಟಿ ಪೊಲೀಸರು ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದುವೇ ಡ್ರೋನ್ ಕ್ಯಾಮರಾ ಬಳಕೆ.
ಲಾಕ್ ಡೌನ್ ಆದೇಶ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಇಲ್ಲಿನ ಪೊಲೀಸರು ಡ್ರೋನ್ ಕ್ಯಾಮರಾಗಳನ್ನು ಉಪಯೋಗಿಸುತ್ತಿದ್ದಾರೆ. ಈ ಕ್ಯಾಮರಾ ಮೂಲಕ ವಾಹನಗಳು ಬೀದಿಗಿಳಿದಿರುವುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಡ್ರೋನ್ ಕ್ಯಾಮರಾ ಮೂಲಕ ಸುಲಭವಾಗಿ ಎಲ್ಲಾ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ಪತ್ತೆಹಚ್ಚಬಹುದು. ಅಲ್ಲದೆ, ಆ ವಾಹನ ಎಲ್ಲಿಗೆ ಹೋಗುತ್ತಿದೆ. ರಸ್ತೆ ಯಾವುದು ಎಂಬುದನ್ನು ಕುಳಿತಲ್ಲಿಯೇ ಕ್ಯಾಮರಾ ಸಹಾಯದಿಂದ ನೋಡಬಹುದು. ಆ ನಂತರ ಆ ಪ್ರದೇಶದಲ್ಲಿ ಗಸ್ತು ತಿರುಗುವ ಸಿಬ್ಬಂದಿಗೆ ಸೂಚಿಸಿಆರೋಪಿಗಳನ್ನು ಬಂಧಿಸಬಹುದಾಗಿದೆ.

ADVERTISEMENT

ಅಸ್ಸಾಂ ಪೊಲೀಸರು ಇದೇ ಮಾರ್ಗ ಅನುಸರಿಸಿ ಈಗ 75 ಮಂದಿಯನ್ನು ಬಂಧಿಸಿದ್ದು, 2000 ವಾಹನಗಳನ್ನು ಜಪ್ತಿಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.