ADVERTISEMENT

ಅಸ್ಸಾಂ ರಾಜಭವನ ಪ್ರದೇಶ ಕಂಟೈನ್‌ಮೆಂಟ್ ವಲಯವೆಂದು ಘೋಷಣೆ: ಸೀಲ್‌ಡೌನ್‌ಗೆ ಸೂಚನೆ

ಏಜೆನ್ಸೀಸ್
Published 5 ಜುಲೈ 2020, 5:02 IST
Last Updated 5 ಜುಲೈ 2020, 5:02 IST
   

ಗುವಾಹಟಿ:ಅಸ್ಸಾಂನರಾಜಭವನ ಕ್ಯಾಂಪಸ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್‌–19 ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ, ಈ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ.

ರಾಜಭವನ ಪ್ರದೇಶವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಘೋಷಿಸಿರುವುದಾಗಿ ಕಾಮ‌ರೂಪ್‌ ಮೆಟ್ರೋಪಾಲಿಟಿನ್‌ ಜಿಲ್ಲಾಧಿಕಾರಿ ಬಿಸ್ವಜಿತ್ ಪೆಗು ಆದೇಶ ಹೊರಡಿಸಿದ್ದಾರೆ. ತಕ್ಷಣವೇ ಈ ಪ್ರದೇಶವನ್ನು ಸೀಲ್‌ಡೌನ್ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.‌

ಉತ್ತರದಲ್ಲಿ ಹೋಟೆಲ್‌ ಬೆಲ್ಲೆ ವ್ಹೀವ್‌ ಬಳಿಯಿಂದ ದಕ್ಷಿಣದಲ್ಲಿ ಬೊಂಕ್ವಾರ್‌‌ ನಗರದವರೆಗೆ ಹಾಗೂ ಪೂರ್ವದಲ್ಲಿ ಬೊರ್ಥಾಕುರ್‌ನಿಂದ ಪಶ್ಚಿಮದಲ್ಲಿ ಮಹಾತ್ಮಗಾಂಧಿ ರಸ್ತೆವರೆಗೆ ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಲಾಗಿದೆ.

ADVERTISEMENT

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಜುಲೈ 4ರ ವರೆಗೆ ಅಸ್ಸಾಂನಲ್ಲಿ ಇದುವರೆಗೆ 9,673 ಜನರಿಗೆ ಕೋವಿಡ್‌–19 ಸೋಂಕು ತಗುಲಿದೆ, ಇದರಲ್ಲಿ 6,349 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಇನ್ನೂ 3,310 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.