ADVERTISEMENT

ಅಸ್ಸಾಂನಲ್ಲಿ ಶಾಲೆಗಳು ಪುನರಾರಂಭ

ಏಜೆನ್ಸೀಸ್
Published 2 ನವೆಂಬರ್ 2020, 7:59 IST
Last Updated 2 ನವೆಂಬರ್ 2020, 7:59 IST
ಗುವಾಹಟಿಯ ಶಾಲೆಯೊಂದರಲ್ಲಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳು – ಎಎನ್‌ಐ ಚಿತ್ರ
ಗುವಾಹಟಿಯ ಶಾಲೆಯೊಂದರಲ್ಲಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳು – ಎಎನ್‌ಐ ಚಿತ್ರ   

ಗುವಾಹಟಿ: ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ 7 ತಿಂಗಳ ಹಿಂದೆ ಮುಚ್ಚಿದ್ದ ಶಾಲೆಗಳು ಅಸ್ಸಾಂನಲ್ಲಿ ಪುನರಾರಂಭಗೊಂಡಿವೆ.

‘ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ನಾವು ಶಾಲೆಯನ್ನು ಪುನರಾರಂಭ ಮಾಡಿದ್ದು ಸಂತಸ ತಂದಿದೆ. ಈ ಹಿಂದೆ ಹಿರಿಯ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳನ್ನು ಪುನರಾರಂಭಿಸಲಾಗಿತ್ತು. ಇಂದು ನಾವು 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆ ಆರಂಭಿಸಿದ್ದೇವೆ. ಮಾರ್ಗಸೂಚಿ ಮತ್ತು ಪ್ರೊಟೊಕಾಲ್‌ಗಳನ್ನು ಅನುಸರಿಸಲಾಗುತ್ತಿದೆ’ ಎಂದು ಗುವಾಹಟಿಯ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

ನವೆಂಬರ್ 1ರ ಬಳಿಕ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.