ADVERTISEMENT

ಕ್ಲಬ್‌ ಮುಂಭಾಗದಲ್ಲಿ ಸ್ಫೋಟ: ದಾಳಿಯ ಹೊಣೆ ಹೊತ್ತುಕೊಂಡ ರೋಹಿತ್‌ ಗೋದಾರಾ

ಪಿಟಿಐ
Published 12 ಡಿಸೆಂಬರ್ 2024, 15:33 IST
Last Updated 12 ಡಿಸೆಂಬರ್ 2024, 15:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುರುಗ್ರಾಮ: ಇಲ್ಲಿನ ಕ್ಲಬ್‌ವೊಂದರ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ನಡೆದ ಕಚ್ಚಾ ಬಾಂಬ್‌ ಸ್ಫೋಟದ ದಾಳಿಯ ಹೊಣೆಯನ್ನು ಪಾತಕಿ ರೋಹಿತ್‌ ಗೋದಾರಾ ಹೊತ್ತುಕೊಂಡಿದ್ದಾನೆ. ಈತ, ಕುಖ್ಯಾತ ಪಾತಕಿಗಳಾದ ಗೋಲ್ಡಿ ಬ್ರಾರ್‌ ಹಾಗೂ ಲಾರೆನ್ಸ್‌ ಬಿಷ್ಣೋಯಿಯ ಸಹಚರ ಎನ್ನಲಾಗಿದೆ.

‘ರಾಮ್‌– ರಾಮ್‌ ಜೈ ಶ್ರೀರಾಮ್‌. ನಾನು ರೋಹಿತ್‌ ಗೋದಾರಾ. ಗೋಲ್ಡಿ ಬ್ರಾರ್‌ನ ಸಹಚರ. ಚಂಡೀಗಢ ಹಾಗೂ ಗುರುಗ್ರಾಮದ ಸೆಕ್ಟರ್‌ 29ರಲ್ಲಿನ ಕ್ಲಬ್‌ಗಳ ಮುಂಭಾಗದಲ್ಲಿ ನಡೆದ ಸ್ಫೋಟಗಳ ರೂವಾರಿ’ ಎಂದು ರೋಹಿತ್‌ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾನೆ.

ಈ ಎರಡು ದಾಳಿಗಳು ಕೇವಲ ‘ಟ್ರೈಲರ್‌’ ಆಗಿದ್ದು, ಬಡವರ ಸುಲಿಗೆ ಮಾಡುವವರು ಹಾಗೂ ತೆರಿಗೆ ವಂಚಿಸಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಕ್ಲಬ್‌ಗಳು ಹಾಗೂ ಹವಾಲಾ ದಂಧೆಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ಸ್ಫೋಟ ಪ್ರಕರಣ ಸಂಬಂಧ, ಗುರುಗ್ರಾಮ ಪೊಲೀಸರು ಸಚಿನ್‌ ತಾಲಿಯಾನ್‌ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.