ADVERTISEMENT

ನಿರುದ್ಯೋಗ ದರ: ರಾಜಸ್ಥಾನದಲ್ಲಿ ಅತಿ ಹೆಚ್ಚು, ಜಮ್ಮು ಕಾಶ್ಮೀರಕ್ಕೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 11:43 IST
Last Updated 26 ಅಕ್ಟೋಬರ್ 2020, 11:43 IST
.
.   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ದರ ಪ್ರಮಾಣ ಶೇಕಡ 16.2ರಷ್ಟಿದ್ದು, ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ.

ಉದ್ಯೋಗ ಸೃಷ್ಟಿಸುವ ನೀತಿಯನ್ನು ರೂಪಿಸದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಭಾರತೀಯ ಆರ್ಥಿಕತೆಯ ನಿಗಾ ಕೇಂದ್ರ (ಸಿಎಂಐಇ) ನೀಡಿದ ಮಾಹಿತಿ ಅನ್ವಯ, ದೇಶದಲ್ಲಿನ ನಿರುದ್ಯೋಗ ದರ ಶೇಕಡ 6.7ರಷ್ಟಿದೆ. ಅಂದರೆ, ಜಮ್ಮು ಮತ್ತು ಕಾಶ್ಮೀರದ ನಿರುದ್ಯೋಗ ದರ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ.

ADVERTISEMENT

ರಾಜಸ್ಥಾನದಲ್ಲಿ ನಿರುದ್ಯೋಗ ದರ ಶೇಕಡ 19.7ರಷ್ಟಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಿಂದಲೂ ನಿರುದ್ಯೋಗ ತೀವ್ರವಾಗಿದೆ. ಕಳೆದ ವರ್ಷ ಉದ್ಯೋಗ ನಿರ್ದೇಶನಾಲಯವು ಉದ್ಯೋಗಕ್ಕಾಗಿ ನೋಂದಣಿ ಅಭಿಯಾನ ನಡೆಸಿದಾಗ ಸ್ನಾತಕೋತ್ತರ ಮತ್ತು ಪಿಎಚ್‌.ಡಿ. ಪದವಿ ಹೊಂದಿದ್ದ 3 ಲಕ್ಷ ಮಂದಿ ನೋಂದಣಿ ಮಾಡಿಸಿದ್ದರು.

ಕಳೆದ ವರ್ಷ 370 ವಿಧಿ ರದ್ದುಪಡಿಸಿದ ಬಳಿಕ ಮತ್ತು ಕೋವಿಡ್‌–19 ನಿಯಂತ್ರಿಸಲು ಹೇರಿದ ಲಾಕ್‌ಡೌನ್‌ನಿಂದ ಐದು ಲಕ್ಷ ಮಂದಿ ಕಾಶ್ಮೀರದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿಯ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.