ADVERTISEMENT

3.6 ಡಿಗ್ರಿ ಸೆಲ್ಸಿಯಸ್: ಜಮ್ಮುವಿನಲ್ಲಿ 11 ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ

ಐಎಎನ್ಎಸ್
Published 14 ಫೆಬ್ರುವರಿ 2023, 6:15 IST
Last Updated 14 ಫೆಬ್ರುವರಿ 2023, 6:15 IST
   

ಶ್ರೀನಗರ: ಜಮ್ಮು ನಗರದಲ್ಲಿ ಸೋಮವಾರ ರಾತ್ರಿ 3.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಕಳೆದ 11 ವರ್ಷಗಳಲ್ಲಿ ಈ ಋತುವಿನ ಅತ್ಯಂತ ಶೀತದ ರಾತ್ರಿಯಾಗಿದೆ.

‘ಫೆಬ್ರುವರಿ 8, 2012ರಂದು ನಗರದಲ್ಲಿ ಕನಿಷ್ಠ ತಾಪಮಾನ 3.2ಸೆಲ್ಸಿಯಸ್‌ಗೆ ಇಳಿದಿತ್ತು. ಅದಾದ ಬಳಿಕ, ಸೋಮವಾರ ರಾತ್ರಿ ಕನಿಷ್ಠ ತಾಪಮಾನ 3.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 11 ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ’ ಎಂದು ಹವಾಮಾನ (ಎಂಇಟಿ) ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಜಮ್ಮುವಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಶುಷ್ಕ ವಾತಾವರಣ ಇರುತ್ತದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಶ್ರೀನಗರದಲ್ಲಿ ಮೈನಸ್ 1.6, ಪಹಲ್ಗಾಮ್‌ನಲ್ಲಿ ಮೈನಸ್ 4.6 ಮತ್ತು ಗುಲ್ಮಾರ್ಗ್ ಮೈನಸ್ 7.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಲಡಾಕ್‌ನ ಡ್ರಾಸ್‌ನಲ್ಲಿ ಮೈನಸ್ 16.3, ಕಾರ್ಗಿಲ್‌ನಲ್ಲಿ ಮೈನಸ್ 17.4 ಮತ್ತು ಲೇಹ್‌ನಲ್ಲಿ ಮೈನಸ್ 12.2 ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.