ADVERTISEMENT

ಔರಂಗಾಬಾದ್ ರೈಲು ನಿಲ್ದಾಣಕ್ಕೆ ಮರುನಾಮಕರಣ

ಪಿಟಿಐ
Published 18 ಅಕ್ಟೋಬರ್ 2025, 13:23 IST
Last Updated 18 ಅಕ್ಟೋಬರ್ 2025, 13:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನು ಛತ್ರಪತಿ ಸಂಭಾಜಿನಗರ ನಿಲ್ದಾಣ ಎಂದು ಮರುನಾಮಕರಣ ಮಾಡಿ ಅಕ್ಟೋಬರ್ 15ರಂದು ರಾಜ್ಯ ಸರ್ಕಾರ ಗಜೆಟ್ ಅಧಿಸೂಚನೆ ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ಏಕನಾಥ್ ಶಿಂದೆ ನೇತೃತ್ವದ ಈ ಹಿಂದಿನ ಸರ್ಕಾರವು ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಔಪಚಾರಿಕವಾಗಿ ಮರುನಾಮರಣ ಮಾಡಿತ್ತು. ಅದಾಗಿ ಸುಮಾರು ಮೂರು ವರ್ಷಗಳ ನಂತರ ಈ ಬೆಳವಣಿಗೆ ನಡೆದಿದೆ.

ಮೊಘಲ್ ಸಾಮ್ರಾಟ ಔರಂಗಜೇಬ್ ಹೆಸರಿನಲ್ಲಿ ಇದ್ದ ನಗರದ ಹೆಸರನ್ನು ಮರಾಠ ದೊರೆ ಛತ್ರಪತಿ ಶಿವಾಜಿಯ ಪುತ್ರನ ಹೆಸರನ್ನಿಟ್ಟು ಬದಲಾಯಿಸಲಾಗಿದೆ. ಈ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವು ನಗರದ ಹೆಸರನ್ನು ಬದಲಾಯಿಸುವ ಕಾರ್ಯವನ್ನು ಪ್ರಾರಂಭಿಸಿತ್ತು.

ADVERTISEMENT

1900ನೇ ಇಸವಿಯಲ್ಲಿ ಆರಂಭವಾದ ಔರಂಗಾಬಾದ್ ರೈಲು ನಿಲ್ದಾಣವನ್ನು ಹೈದರಾಬಾದ್‌ನ 7ನೇ ನಿಜಾಮ ಮಿರ್ ಉಸ್ಮಾನ್ ಅಲಿ ಖಾನ್ ನಿರ್ಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.