ADVERTISEMENT

Ram Mandir: ಜ.22ರಂದು ಉ.ಪ್ರದೇಶದಲ್ಲಿ ಶಾಲೆಗಳಿಗೆ ರಜೆ, ಮದ್ಯದಂಗಡಿ ಬಂದ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2024, 13:36 IST
Last Updated 9 ಜನವರಿ 2024, 13:36 IST
<div class="paragraphs"><p>ಯೋಗಿ ಆದಿತ್ಯನಾಥ್</p></div>

ಯೋಗಿ ಆದಿತ್ಯನಾಥ್

   

(ಚಿತ್ರ ಕೃಪೆ: X/@myogiadityanath)

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ದಿನದಂದು (ಜನವರಿ 22) ರಾಜ್ಯದಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ದೇಶನ ನೀಡಿದ್ದಾರೆ.

ADVERTISEMENT

ಅದೇ ದಿನ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಿಎಂ ಆದಿತ್ಯನಾಥ ಮಾಹಿತಿ ನೀಡಿದ್ದಾರೆ.

'ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ 'ರಾಷ್ಟ್ರೀಯ ಉತ್ಸವ' ಆಗಿದೆ. ಶತಮಾನಗಳ ಕಾಯುವಿಕೆಯ ನಂತರ ಈ ಶುಭ ಗಳಿಗೆ ಬಂದಿದೆ. ಈ ಸಂದರ್ಭದಲ್ಲಿ ಎಲ್ಲ ಸರ್ಕಾರಿ ಕಚೇರಿಗಳನ್ನು ದಿವ್ಯ ಸ್ವರೂಪದಲ್ಲಿ ಅಲಂಕರಿಸಲಾಗುವುದು. ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜ. 22ರಂದು ರಜೆ ಘೋಷಿಸಲು ಸೂಚನೆ ನೀಡಿದ್ದೇನೆ. ಬನ್ನಿ ಎಲ್ಲರೂ ಒಟ್ಟಾಗಿ ರಾಮೋತ್ಸವವನ್ನು ಆಚರಿಸೋಣ' ಎಂದು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.