ADVERTISEMENT

ರಾಮ ಮಂದಿರಕ್ಕೆ ನಿರಂತರ ಒತ್ತಡ: ಸಂತರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 20:00 IST
Last Updated 5 ಅಕ್ಟೋಬರ್ 2018, 20:00 IST
   

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಮುನ್ನೆಲೆಗೆ ಬಂದಿದೆ. ಸಂತರ ಉನ್ನತಾಧಿಕಾರ ಸಮಿತಿಯು ಶುಕ್ರವಾರ ಸಭೆ ಸೇರಿದೆ. ಮಂದಿರ ನಿರ್ಮಾಣಕ್ಕಾಗಿ ಶಾಸನ ರೂಪಿಸಲು ಸಂಸದರ ಮೇಲೆ ಒತ್ತಡ ಹೇರಲು ಈ ಸಮಿತಿ ನಿರ್ಧರಿಸಿದೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಆಗಿರುವ ವಿಳಂಬದ ಬಗ್ಗೆ ಸಮಿತಿಯು ಅತೃಪ್ತಿ ವ್ಯಕ್ತಪಡಿಸಿದೆ. ಮಂದಿರ ನಿರ್ಮಾಣಕ್ಕಾಗಿ ಶಾಸನ ರಚಿಸಲು ಒತ್ತಡ ಹೇರುವುದಕ್ಕಾಗಿ ಜನಾಂದೋಲನ ನಡೆಸುವುದಕ್ಕೂ ಸಮಿತಿ ತೀರ್ಮಾನಿಸಿದೆ.

2019ರ ಜನವರಿ 31ರಂದು ಅಲಹಾಬಾದ್‌ನಲ್ಲಿ ನಡೆಯಲಿರುವ ಧರ್ಮ ಸಂಸತ್‌ನಲ್ಲಿ ರಾಮಮಂದಿರ ನಿರ್ಮಾಣ ಚಳವಳಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದುಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ.

ADVERTISEMENT

ಸಂತರ ಸಭೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕಾವೇರಿದ ಚರ್ಚೆ ನಡೆದಿದೆ. ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಕೆಲವು ಸಂತರು ಹಟ ಹಿಡಿದರು.

ಸಂತರ ಕಾರ್ಯಸೂಚಿ

* ಅಕ್ಟೋಬರ್‌ನಲ್ಲಿ ವಿವಿಧ ರಾಜ್ಯಗಳ ರಾಜ್ಯಪಾಲರಿಗೆ ಮನವಿ;ನವೆಂಬರ್‌ನಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಭಾರಿ ರ್‍ಯಾಲಿ

* ಡಿಸೆಂಬರ್‌ನಲ್ಲಿ ಪ್ರತಿ ದೇವಾಲಯದಲ್ಲಿಯೂ ಸ್ಥಳೀಯ‍ಪರಂಪರೆಗೆ ಅನುಗುಣವಾಗಿ ಕಾರ್ಯಕ್ರಮ

* ಪ್ರಧಾನಿಯನ್ನು ಭೇಟಿಯಾಗಿ ರಾಮಭಕ್ತರ ಭಾವನೆ ಮನವರಿಕೆ ಮಾಡಲು ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.