.
ತಿರುವನಂತಪುರ: ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ಸಜ್ಜಾಗಿರುವುದನ್ನು ಎಸ್‌ಎನ್‌ಡಿಪಿ ಸ್ವಾಗತಿಸಿದೆ.
ಜಗತ್ತಿನಾದ್ಯಂತ ಇರುವ ಅಯ್ಯಪ್ಪನ ಭಕ್ತರು ರಾಜ್ಯಕ್ಕೆ ಭೇಟಿ ನೀಡಲು ಟಿಡಿಬಿಯ ಈ ಕಾರ್ಯಕ್ರಮವು ದಾರಿ ಮಾಡಿಕೊಡಲಿದೆ ಎಂದು ಈಳವ ಸಮುದಾಯದ ಶ್ರೀ ನಾರಾಯಣ ಧರ್ಮ ಪರಿಪಾಲನಾ (ಎಸ್‌ಎನ್‌ಡಿಪಿ) ಯೋಗಂ ಭಾನುವಾರ ತಿಳಿಸಿದೆ.
ಅಯ್ಯಪ್ಪ ಸಂಗಮವು ರಾಜ್ಯದ ಸಾಮಾಜಿಕ– ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಕೇರಳ ಸರ್ಕಾರದ ಸಹಯೋಗದೊಂದಿಗೆ ಟಿಡಿಬಿಯು ತನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಪಂಪಾದಲ್ಲಿ ಸೆಪ್ಟೆಂಬರ್ 20ರಂದು ಜಾಗತಿಕ ಅಯ್ಯಪ್ಪ ಸಂಗಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಟೀಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.