ADVERTISEMENT

ರಾಮದೇವ್‌ ದೇಶದ ಜನರ ಕ್ಷಮೆಯಾಚಿಸಲಿ: ಮಹಿಳಾ ಆಯೋಗದ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 15:30 IST
Last Updated 27 ನವೆಂಬರ್ 2022, 15:30 IST
ಬಾಬಾ ರಾಮದೇವ
ಬಾಬಾ ರಾಮದೇವ   

ನವದೆಹಲಿ: ‘ಮಹಿಳೆಯರು ಸೀರೆ ಉಟ್ಟರೆ ಸುಂದರ, ಸಲ್ವಾರ್‌ ಕಮೀಜ್‌ ಧರಿಸಿದರೆ ಅತಿ ಸುಂದರ, ಬಟ್ಟೆಯನ್ನೇ ಧರಿಸದಿದ್ದರೂ ಅಂದವಾಗಿ ಕಾಣಿಸುತ್ತಾರೆ’ ಎಂಬ ಯೋಗ ಗುರು ಬಾಬಾ ರಾಮದೇವ್‌ ಅವರ ಹೇಳಿಕೆಗೆ ನವದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ಕಿಡಿಕಾರಿದ್ದಾರೆ.

ರಾಮದೇವ್‌ ಅವರು ಆಡಿದ ಮಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೇಳಿಕೆಯ ವಿಡಿಯೊ ಹಂಚಿಕೊಂಡಿರುವ ಸ್ವಾತಿ ಮಾಲಿವಾಲ್‌, ‘ಮಹಿಳೆಯರ ಬಗ್ಗೆ ಹಗುರ ಹೇಳಿಕೆ ನೀಡಿರುವ ರಾಮದೇವ್‌ ಕೂಡಲೇ ದೇಶದ ಜನತೆಯ ಕ್ಷಮೆ ಕೇಳಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

‘ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಪತ್ನಿ ಮುಂದೆ ಮಹಿಳೆಯರ ಬಗ್ಗೆ ರಾಮದೇವ್ ನೀಡಿದ ಹೇಳಿಕೆಗಳು ಅಸಭ್ಯ ಮತ್ತು ಖಂಡನೀಯ. ಈ ಹೇಳಿಕೆಯಿಂದ ಮಹಿಳೆಯರ ಮನಸ್ಸಿಗೆ ನೋವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಠಾಣೆಯಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ರಾಮದೇವ್‌ ಪಾಲ್ಗೊಂಡಿದ್ದರು. ದೇವೇಂದ್ರ ಫಡಣವೀಸ್‌ ಪತ್ನಿ ಅಮೃತಾ, ಸಿ.ಎಂ ಏಕನಾಥ್ ಶಿಂದೆ ಅವರ ಮಗ ಮತ್ತು ಸಂಸದ ಶ್ರೀಕಾಂತ್ ಶಿಂದೆ ಕೂಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.