ADVERTISEMENT

ವಿದ್ಯುತ್ ಕಡಿತ: ಆಂಧ್ರ ಜನರಿಗೆ ತೊಂದರೆ; ಕೆ.ಟಿ.ರಾಮರಾವ್‌ ಹೇಳಿಕೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 17:14 IST
Last Updated 29 ಏಪ್ರಿಲ್ 2022, 17:14 IST
ಕೆ.ಟಿ.ರಾಮರಾವ್‌
ಕೆ.ಟಿ.ರಾಮರಾವ್‌   

ಹೈದರಾಬಾದ್‌: ಹದಗೆಟ್ಟ ರಸ್ತೆಗಳು, ಅಸಮರ್ಪಕ ನೀರು ಪೂರೈಕೆ ಮತ್ತು ವಿದ್ಯುತ್ ಕಡಿತದಿಂದಾಗಿ ನೆರೆಯ ಆಂಧ್ರ ಪ್ರದೇಶದಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತೆಲಂಗಾಣದ ಕೈಗಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್‌ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ರಾಮರಾವ್‌ ಅವರ ಈ ಹೇಳಿಕೆಗೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಚಿವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು,‘ನಿಮ್ಮ ರಾಜ್ಯದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಿ’ ಎಂದಿದ್ದಾರೆ.

ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ ರಾಮರಾವ್‌ ಅವರು, ‘ಗೃಹ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಿಗೆ 24 ಗಂಟೆಯೂ ನಿರಂತರ ವಿದ್ಯುತ್‌ ನೀಡುತ್ತಿರುವ ಏಕೈಕ ರಾಜ್ಯ ತೆಲಂಗಾಣ. ಆದರೆ ಹೈದರಾಬಾದ್‌ನ ಸ್ನೇಹಿತರೊಬ್ಬರು ಈಚೆಗೆ ಅವರ ಊರಿಗೆ ಹೋಗಿದ್ದರು ಅಲ್ಲಿನ ಪರಿಸ್ಥಿತಿಯನ್ನು ಕಂಡು ಹತಾಶರಾಗಿ ನನಗೆ ಮಾಹಿತಿ ನೀಡಿದ್ದರು’ ಎಂದು ಹೇಳಿದ್ದಾರೆ.

ADVERTISEMENT

ರಾಮರಾವ್‌ ಅವರು ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು ಎಂದು ಆಂಧ್ರ ಪ್ರದೇಶದ ಶಿಕ್ಷಣ ಸಚಿವ ಬೊಚ್ಚ ಸತ್ಯನಾರಾಯಣ ಆಗ್ರಹಿಸಿದ್ದಾರೆ.

ಹೈದರಾಬಾದ್‌ನಲ್ಲಿ ವಿದ್ಯುತ್‌ ಕಡಿತ ಇದೆ. ಆದರೆ, ನಾವು ಜನರೇಟರ್‌ಗಳನ್ನು ಬಳಸುತ್ತಿದ್ದೇವೆ. ಇಂತಹ ಬೇಜವಾಬ್ದಾರಿಯ ಹೇಳಿಕೆ ನೀಡಬೇಡಿ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.