ADVERTISEMENT

ಕ್ರಿಸ್‌ಮಸ್‌ ಆಚರಿಸದಂತೆ ಹಿಂದೂಗಳಿಗೆ ಬಜರಂಗದಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 14:41 IST
Last Updated 5 ಡಿಸೆಂಬರ್ 2020, 14:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗುವಾಹಟಿ: ಹಿಂದೂಗಳು ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಆಚರಿಸದಂತೆ ಬಜರಂಗದಳದ ಅಸ್ಸಾಂನ ಕಾಚರ್‌ ಜಿಲ್ಲಾ ಘಟಕವು ಎಚ್ಚರಿಕೆ ನೀಡಿದೆ.

ತಮ್ಮ ಮಾತನ್ನು ಮೀರಿ ಕ್ರಿಸ್‌ಮಸ್‌ ಆಚರಿಸುವವರಿಗೆ ಥಳಿಸಲಾಗುವುದು ಎಂದು ಅದು ಬೆದರಿಕೆ ಹಾಕಿದೆ.

‘ಮೇಘಾಲಯದ ಕ್ರಿಶ್ಚಿಯನ್‌ ವಿದ್ಯಾರ್ಥಿ ಸಂಘಟನೆಯೂ ಕೆಲವು ಹಿಂದೂ ದೇವಸ್ಥಾನಗಳನ್ನು ಬಲವಂತವಾಗಿ ಮುಚ್ಚಿಸಿವೆ. ಅವರು ನಮ್ಮ ದೇವಸ್ಥಾನಗಳನ್ನು ಮುಚ್ಚಿಸುತ್ತಾರೆ. ಆದರೆ, ಹಿಂದೂಗಳು ಅವರ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ. ಹಿಂದೂಗಳು ಚರ್ಚ್‌ಗೆ ಹೋಗದಂತೆ ತಡೆಯುತ್ತೇವೆ’ ಎಂದು ಕಾಚರ್ ಜಿಲ್ಲೆಯ ಭಜರಂಗದಳದ ಪ್ರಧಾನ ಕಾರ್ಯದರ್ಶಿ ಮಿಚು ನಾಥ್ ಹೇಳಿದ್ದಾರೆ.

ADVERTISEMENT

ಡಿಸೆಂಬರ್ 25 ರಂದು ಕ್ರಿಸ್‌ಮಸ್‌ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಲ್ಚಾರ್ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.