ADVERTISEMENT

ಮೋದಿಯನ್ನು ಠಾಕ್ರೆ ರಕ್ಷಿಸದೇ ಹೋಗಿದ್ದರೆ ಇಂದು ಪ್ರಧಾನಿ ಆಗುತ್ತಿರಲಿಲ್ಲ: ಉದ್ಧವ್

ಪಿಟಿಐ
Published 13 ಫೆಬ್ರುವರಿ 2023, 5:00 IST
Last Updated 13 ಫೆಬ್ರುವರಿ 2023, 5:00 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ (ಪಿಟಿಐ): ‘ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲಿಸುವಂತೆ ಆಗಿನ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಸೂಚಿಸಿದ್ದರು. ಆಗ ಬಾಳಾಸಾಹೇಬ್‌ ಠಾಕ್ರೆ ಅವರು ಮೋದಿಯನ್ನು ರಕ್ಷಿಸಿದ್ದರು.

ಒಂದೊಮ್ಮೆ ಅವರು ರಕ್ಷಣೆ ಮಾಡದೆ ಹೋಗಿದ್ದರೆ ಮೋದಿ ಅವರು ಇಂದು ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ. ಪ್ರಧಾನಿಯೂ ಆಗುತ್ತಿರಲಿಲ್ಲ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿರುವ ಅವರು, ‘ಬಿಜೆಪಿಯದ್ದು ನಿಜವಾದ ಹಿಂದುತ್ವ ಅಲ್ಲ. ಪರಸ್ಪರ ದ್ವೇಷಿಸುವುದಕ್ಕೆ ಹಿಂದುತ್ವ ಎಂದು ಹೇಳುವುದಿಲ್ಲ. ನಾನು ಬಿಜೆಪಿಯಿಂದ ದೂರ ಉಳಿದಿದ್ದೇನೆ. ಆದರೆ ಹಿಂದುತ್ವ ಕೈಬಿಟ್ಟಿಲ್ಲ. ಶಿವಸೇನಾ, ಅಕಾಲಿದಳವು ಎನ್‌ಡಿಎ ಭಾಗವಾಗಿರುವುದು ಬಿಜೆಪಿಗೆ ಇಷ್ಟವಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.