ಬಲ್ಲಿಯಾ : ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಅಡುಗೆ ಮಾಡುವ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳವಾಗಿ ಹೆಂಡತಿಯು ಚಾಕುವಿನಿಂದ ಹಲ್ಲೇ ನಡೆಸಿರುವ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಮಹಾವೀರ ನಗರದಲ್ಲಿ ಅಡುಗೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಪತಿ ಸಂಜಯ್ ಕುಮಾರ್(28) ಮೇಲೆ ಪತ್ನಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ರಾಸ್ರಾ ಪೊಲೀಸ್ ಠಾಣೆಯ ಡಿ.ಎಸ್.ಪಿ ಆಲೋಕ್ ಗುಪ್ತ ಹೇಳಿದ್ದಾರೆ.
ಲಾಲ್ಬುಚಿ ದೇವಿಯು ಮನೆಯಲ್ಲಿ ಅಡುಗೆಗೆ ಹಿಟ್ಟು ಇಲ್ಲದ ಕಾರಣ ರಾತ್ರಿ ಊಟಕ್ಕಾಗಿ ಗಂಡ ಹಾಗೂ ಮೂವರು ಮಕ್ಕಳಿಗೆಂದು ಕಿಚಡಿಯನ್ನು ತಯಾರಿಸಿದ್ದಾಳೆ. ಸಂಜಯ್ ಕುಮಾರ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ರೊಟ್ಟಿಯನ್ನು ಮಾಡುವಂತೆ ಹೇಳಿದ್ದಾಳೆ. ಆಗ ಇಬ್ಬರ ಮಧ್ಯೆ ಜಗಳ ಉಂಟಾಗಿ ಕೋಪದಲ್ಲಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಗಂಡನ ಎದೆಗೆ ಇರಿದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಗ್ರಾಮಸ್ಥರು ಸಂಜಯ್‌ನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ವೈದ್ಯರ ಸಲಹೆಯಂತೆ ಮೌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದವರು ನೀಡಿರುವ ದೂರನ್ನು ಆಧರಿಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಗುಪ್ತ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.